ಚೀನಾದ ರಹಸ್ಯ ಕ್ಯಾಂಪ್ ಗಳಲ್ಲಿ ಉಯ್ಘರ್ ಮುಸ್ಲಿಮರು: ವರದಿ!

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 12, Aug 2018, 12:13 PM IST
China may have detained more than 1 million Uighurs in secret camps
Highlights

ಚೀನಾದ ರಹಸ್ಯ ಕ್ಯಾಂಪ್ ಗಳಲ್ಲಿ ಉಯ್ಘರ್ ಮುಸ್ಲಿಮರು! ಕ್ಯಾಂಪ್ ಗಳಲ್ಲಿ ಉಯ್ಘರ್ ಮುಸ್ಲಿಮರ ಅಕ್ರಮ ಬಂಧನ! ವಿಶ್ವಸಂಸ್ಥೆ ಮಾನವ ಹಕ್ಕುಗಳ ಸಮಿತಿ ವರದಿ ಬಹಿರಂಗ! ವಿಶ್ವಸಂಸ್ಥೆ ಮಾನವ ಹಕ್ಕು ವರದಿಗೆ ತುಟಿ ಬಿಚ್ಚದ ಚೀನಾ

ವಾಷಿಂಗ್ಟನ್(ಆ.12): ಚೀನಾದ ರಹಸ್ಯ ರಾಜಕೀಯ ಕ್ಯಾಂಪ್ ಗಳಲ್ಲಿ ಲಕ್ಷಾಂತರ ಉಯ್ಘರ್ ಮುಸ್ಲಿಮರನ್ನು ಸೆರೆ ಹಿಡಿದಿಡಲಾಗಿದೆ ಎಂದು ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಸಮಿತಿ ಹೇಳಿದೆ. 

ಚೀನಾದ ಈ ಕೃತ್ಯದ ಬಗ್ಗೆ ತನ್ನ ಬಳಿ ವಿಶ್ವಾಸಾರ್ಹ ವರದಿಗಳಿವೆ ಎಂದು ವಿಶ್ವಸಂಸ್ಥೆ ಮಾನವ ಹಕ್ಕುಗಳ ಸಮಿತಿ ಹೇಳಿದ್ದು, ಈ ಕ್ಯಾಂಪ್ ಗಳು ಕಾರಾಗೃಹ ಕ್ಯಾಂಪ್ ಗಳನ್ನು ಹೋಲುತ್ತವೆ ಎಂದು ಆತಂಕ ವ್ಯಕ್ತಪಡಿಸಿವೆ. 

ವಿಶ್ವಸಂಸ್ಥೆಯ ಮಾನವಹಕ್ಕುಗಳ ಜನಾಂಗೀಯ ತಾರತಮ್ಯ ನಿಗ್ರಹ ವಿಭಾಗದ ಸದಸ್ಯರಾಗಿರುವ ಗೇ ಮೆಕ್ಡೊಗಾಲ್ ಪ್ರಕಾರ, 2 ಮಿಲಿಯನ್ ಗೂ ಉಯ್ಘರ್ ಹಾಗೂ ಮುಸ್ಲಿಂ ಅಲ್ಪಸಂಖ್ಯಾತರು  ರಹಸ್ಯ ಕ್ಯಾಂಪ್ ಗಳಲ್ಲಿದ್ದಾರೆ ಎಂದು ತಿಳಿಸಿದ್ದಾರೆ.  

ವಿಶ್ವಸಂಸ್ಥೆಯ ಈ ಹೇಳಿಕೆಗೆ ಚೀನಾದ ಅಧಿಕಾರಿಗಳಿಂದ ಇನ್ನೂ ಯಾವುದೇ ರೀತಿಯ ಪ್ರತಿಕ್ರಿಯೆ ಬಂದಿಲ್ಲ. ಉಯ್ಘರ್, ಮುಸ್ಲಿಂ ಅಲ್ಪಸಂಖ್ಯಾತರೆಡೆಗಿನ ತನ್ನ ಈ ನೀತಿಗಳನ್ನು ಕೊನೆಗೊಳಿಸುವಂತೆ ಚೀನಾಗೆ ಕರೆ ನೀಡುತ್ತೇವೆ ಎಂದು ವಿಶ್ವಸಂಸ್ಥೆ ಹೇಳಿದೆ. 

loader