ಬೀಜಿಂಗ್‌[ಮಾ.06]: ಅಮೆರಿಕದ ಬಳಿಕ ಸೇನಾ ವೆಚ್ಚದಲ್ಲಿ ಎರಡನೇ ಸ್ಥಾನದಲ್ಲಿರುವ ಚೀನಾ, ತನ್ನ ರಕ್ಷಣಾ ಬಜೆಟ್‌ ಅನ್ನು ಶೇ.7.5ರಷ್ಟುಏರಿಕೆ ಮಾಡಿದೆ.

ಚೀನಾ ಪ್ರಧಾನಿ ಲಿ ಕೆಖಿಯಾಂಗ್‌ ಮಂಗಳವಾರ ಸಂಸತ್ತಿನಲ್ಲಿ ಮಂಡಿಸಿದ ಬಜೆಟ್‌ನ ಪ್ರಕಾರ, 2019ರ ರಕ್ಷಣಾ ಬಜೆಟ್‌ನ ಗಾತ್ರ 12.61 ಲಕ್ಷ ಕೋಟಿ ರು. ಆಗಿದೆ. ಚೀನಾ 2015ರಿಂದಲೂ ತನ್ನ ರಕ್ಷಣಾ ಬಜೆಟ್‌ನ ಗಾತ್ರವನ್ನು ಏರಿಸುತ್ತಲೇ ಬಂದಿದೆ.

ಭಾರತದ ರಕ್ಷಣಾ ಬಜೆಟ್‌ನ ಗಾತ್ರ 3.18 ಲಕ್ಷ ಕೋಟಿ ರು.ಗೆ ಹೋಲಿಸಿದರೆ ಚೀನಾದ ರಕ್ಷಣಾ ಬಜೆಟ್‌ ನಾಲ್ಕು ಪಟ್ಟು ಅಧಿಕವಾಗಿದೆ.