ಪಾಕ್‌ಗೆ ಚೀನಾದಿಂದ 3250 ಕೋಟಿ ರು. ಸಾಲ

China Give loan To Pakistan
Highlights

ಆರ್ಥಿಕವಾಗಿ ಚೀನಾದ ಹಿಡಿತಕ್ಕೆ ಸಿಲುಕಿರುವ ಪಾಕಿಸ್ತಾನ ಇದೀಗ ತನ್ನ ವಿತ್ತೀಯ ಕೊರತೆ ನೀಗಿಸಲು ಚೀನಾದ ಇಂಡಸ್ಟ್ರಿಯಲ್‌ ಆ್ಯಂಡ್‌ ಕಮರ್ಷಿಯಲ್‌ ಬ್ಯಾಂಕ್‌ನಿಂದ 3250 ಕೋಟಿ ರು. ಸಾಲ ಪಡೆದುಕೊಂಡಿದೆ.

ಇಸ್ಲಾಮಾಬಾದ್‌: ಆರ್ಥಿಕವಾಗಿ ಚೀನಾದ ಹಿಡಿತಕ್ಕೆ ಸಿಲುಕಿರುವ ಪಾಕಿಸ್ತಾನ ಇದೀಗ ತನ್ನ ವಿತ್ತೀಯ ಕೊರತೆ ನೀಗಿಸಲು ಚೀನಾದ ಇಂಡಸ್ಟ್ರಿಯಲ್‌ ಆ್ಯಂಡ್‌ ಕಮರ್ಷಿಯಲ್‌ ಬ್ಯಾಂಕ್‌ನಿಂದ 3250 ಕೋಟಿ ರು. ಸಾಲ ಪಡೆದುಕೊಂಡಿದೆ.

ಅಮೆರಿಕ ಡಾಲರ್‌ ವಿರುದ್ಧ ತೀವ್ರವಾಗಿ ಕುಸಿದಿರುವ ಪಾಕಿಸ್ತಾನದ ರುಪಾಯಿ ಮೌಲ್ಯವನ್ನು ಹೆಚ್ಚಿಸಲು ಚೀನಾದ ಹಣಕಾಸು ಸಂಸ್ಥೆಗಳು ಪಾಕಿಸ್ತಾನಕ್ಕೆ ಸಾಲ ನೀಡುತ್ತಿದ್ದು, ಹೊಸ ಸಾಲದಿಂದಾಗಿ ಕಳೆದ ಮೂರು ತಿಂಗಳಿನಲ್ಲಿ 6500 ಕೋಟಿ ರು. ದಾಟಿದೆ.

ಅಲ್ಲದೇ ಕಳೆದ 7 ತಿಂಗಳಿನಲ್ಲಿ ಪಾಕಿಸ್ತಾನ ವಿದೇಶದಿಂದ 42,900 ಕೋಟಿ ರು. ಸಾಲ ಸಾಲ ಪಡೆದುಕೊಂಡಿದೆ.

loader