ಭಾರತಕ್ಕೆ ಒಂದಿಲ್ಲೊಂದು ರೀತಿ ಕಾಟ ಕೊಡುವ ಚೀನಾ ಈಗ ನೇಪಾಳಕ್ಕೆ ಹೊಂದಿಕೊಂಡ ತನ್ನ ಟಿಬೆಟ್ ಗಡಿಯಲ್ಲಿ ಹೆದ್ದಾರಿಯೊಂದನ್ನು ನಿರ್ಮಿಸಿದೆ. 40.4 ಕಿ.ಮೀ. ಉದ್ದದ ಈ ಹೆದ್ದಾರಿ ಟಿಬೆಟ್‌ನ ಕ್ಸಿಗಾಝೆ ವಿಮಾನ ನಿಲ್ದಾಣದಿಂದ ಕ್ಸಿಗಾಝೆ ಸಿಟಿ ಸೆಂಟರ್’ವರೆಗೆ ಚಾಚಿಕೊಂಡಿದೆ.
ಬೀಜಿಂಗ್: ಭಾರತಕ್ಕೆ ಒಂದಿಲ್ಲೊಂದು ರೀತಿ ಕಾಟ ಕೊಡುವ ಚೀನಾ ಈಗ ನೇಪಾಳಕ್ಕೆ ಹೊಂದಿಕೊಂಡ ತನ್ನ ಟಿಬೆಟ್ ಗಡಿಯಲ್ಲಿ ಹೆದ್ದಾರಿಯೊಂದನ್ನು ನಿರ್ಮಿಸಿದೆ.
40.4 ಕಿ.ಮೀ. ಉದ್ದದ ಈ ಹೆದ್ದಾರಿ ಟಿಬೆಟ್ನ ಕ್ಸಿಗಾಝೆ ವಿಮಾನ ನಿಲ್ದಾಣದಿಂದ ಕ್ಸಿಗಾಝೆ ಸಿಟಿ ಸೆಂಟರ್’ವರೆಗೆ ಚಾಚಿಕೊಂಡಿದೆ.
ಶುಕ್ರವಾರ ಇದು ಸಂಚಾರಕ್ಕೆ ಮುಕ್ತವಾಯಿತು. ಈ ಮೂಲಕ ದಕ್ಷಿಣ ಏಷ್ಯಾಕ್ಕೆ ಚೀನಾ ರಹದಾರಿ ಮಾಡಿಕೊಂಡಂತಾಗಿದೆ. ಅಲ್ಲದೆ, ಭಾರತದ ಮೇಲಿನ ಯಾವುದೇ ಸಂಭವನೀಯ ದಾಳಿ ವೇಳೆ ತನ್ನ ಸೇನೆಯನ್ನು ತುರ್ತಾಗಿ ರವಾನಿಸಲು ಚೀನಾಕ್ಕೆ ನೆರವಾಗಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
