ಚೀನಾದಲ್ಲಿ ಇನ್ಮುಂದೆ ಕ್ಸಿ ಜಿನ್'ಪಿಂಗ್ ಶಾಶ್ವತ ಅಧ್ಯಕ್ಷ : ಮಾವೋ ನಂತರದ ರಾಷ್ಟ್ರದ ಪ್ರಭಾವಿ ನಾಯಕ

First Published 11, Mar 2018, 3:39 PM IST
China clears way for Xi Jinping to rule for life
Highlights

ಇದರಲ್ಲಿ ಕ್ಸಿ ಪರವಾಗಿ  2964 ಪ್ರತಿನಿಧಿಗಳು ಮತ ಚಲಾಯಿಸಿದರೆ, ವಿರುದ್ಧವಾಗಿ ಇಬ್ಬರು ಮಾತ್ರ ತಮ್ಮ ಹಕ್ಕು ಚಲಾಯಿಸಿದರು. ಮೂವರು ಮತ ಚಲಾವಣೆಯನ್ನು ನಿರಾಕರಿಸಿದರು.

ಬೀಜಿಂಗ್(ಮಾ.11): ಚೀನಾದ ಅಧ್ಯಕ್ಷ ಕ್ಸಿ ಜಿನ್'ಪಿಂಗ್ ಇನ್ನು ಮುಂದೆ ಶಾಶ್ವತ ಅಧ್ಯಕ್ಷರಾಗಿ ಮುಂದುವರಿಯಲಿದ್ದಾರೆ.

ಚೀನಾದ ರಾಷ್ಟ್ರೀಯ ಕಾಂಗ್ರೆಸ್ ಸದಸ್ಯರ ವಾರ್ಷಿಕ ಸಭೆಯಲ್ಲಿ ಸಂವಿಧಾನವನ್ನು ಮಾರ್ಪಡಿಸಿ ಈ ಘೋಷಣೆ ಹೊರಡಿಸಿದೆ. ಚೀನಾದ ಗ್ರೇಟ್ ಹಾಲ್'ನಲ್ಲಿ ನಡೆದ ವಾರ್ಷಿಕ ಸಭೆಯಲ್ಲಿ ಸಂವಿಧಾನ ತಿದ್ದುಪಡಿಗಾಗಿ 3000 ರಾಷ್ಟ್ರೀಯ ಕಾಂಗ್ರೆಸ್ ಪ್ರತಿನಿಧಿಗಳು ಸಭೆ ಸೇರಿದ್ದರು.

ಇದರಲ್ಲಿ ಕ್ಸಿ ಪರವಾಗಿ  2964 ಪ್ರತಿನಿಧಿಗಳು ಮತ ಚಲಾಯಿಸಿದರೆ, ವಿರುದ್ಧವಾಗಿ ಇಬ್ಬರು ಮಾತ್ರ ತಮ್ಮ ಹಕ್ಕು ಚಲಾಯಿಸಿದರು. ಮೂವರು ಮತ ಚಲಾವಣೆಯನ್ನು ನಿರಾಕರಿಸಿದರು. ಈ ತಿದ್ದುಪಡಿಯು ಚೀನಾದ ಹಾಲಿ ಸಂವಿದಾನದಲ್ಲಿದ್ದ ಅಧ್ಯಕ್ಷರ 5 ವರ್ಷಗಳ 2 ಸತತ ಅವಧಿಯನ್ನು ತೆಗೆದುಹಾಕುವುದಾಗಿತ್ತು. ಮೂಲ ಸಂವಿಧಾನ ತಿದ್ದುಪಡಿಗೆ ಮೂರನೇ ಎರಡು ಬಹುಮತ ಅವಶ್ಯಕತೆಯಿತ್ತು. ಅಧಿಕಾರರೂಢ ಕಮ್ಯುನಿಷ್ಟ್ ಪಕ್ಷವು ಫೆ.25ರಂದು ನೂತನ ಸಂವಿಧಾನ ಮಾರ್ಪಡಿಸುವ ಪ್ರಸ್ತಾವನೆಯನ್ನು ಸಂಸತ್ತಿನಲ್ಲಿ ಸಲ್ಲಿಸಿತ್ತು. ಇದಕ್ಕೆ ಕೆಲವು ಸದಸ್ಯರು ವಿರೋಧ ವ್ಯಕ್ತಪಡಿಸಿದ್ದರು.

 ನೂತನ ಸಂವಿಧಾನ ಬದಲಾವಣೆಯಿಂದ 64 ವರ್ಷದ ಕ್ಸಿ ಜಿನ್'ಪಿಂಗ್ ಶಾಶ್ವತ ಅಧ್ಯಕ್ಷರಾಗಲಿದ್ದು ದೇಶದ ಪ್ರಮುಖ ಅಧಿಕಾರವನ್ನು ಹೊಂದಿರಲಿದ್ದಾರೆ. 50ರ ದಶಕದಲ್ಲಿ ಮಾವೋ ಇಷ್ಟೆ ಪ್ರಭಾವಿ ನಾಯಕರಾಗಿದ್ದರು. ಸತತ 23 ವರ್ಷಗಳ ಕಾಲ ಅಧಿಕಾರ ನಡೆಸಿದ್ದರು. 90ರ ದಶಕದಿಂದ ಅಧ್ಯಕ್ಷರ ಅಧಿಕಾರವಧಿಯನ್ನು 5 ವರ್ಷಗಳ 2 ಅವಧಿಗೆ ಮಾತ್ರ ಜಾರಿಗೊಳಿಸಲಾಗಿತ್ತು.

loader