ಸಿದ್ದುಗೆ ಮತ್ತೊಂದು ಮದುವೆ ಮಾಡಿಸ್ತೀನಿ !

Chimmanakatti Praises Siddaramaiah
Highlights

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಬಾದಾಮಿ ಕ್ಷೇತ್ರದ ಮಾಜಿ ಶಾಸಕ ಬಿ.ಬಿ.ಚಿಮ್ಮನಕಟ್ಟಿಅವರು ಮತ್ತೊಂದು ಮದುವೆ ಮಾಡಲು ಉತ್ಸುಕರಾಗಿದ್ದಾರೆ!

ಬಾದಾಮಿ: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಬಾದಾಮಿ ಕ್ಷೇತ್ರದ ಮಾಜಿ ಶಾಸಕ ಬಿ.ಬಿ.ಚಿಮ್ಮನಕಟ್ಟಿಅವರು ಮತ್ತೊಂದು ಮದುವೆ ಮಾಡಲು ಉತ್ಸುಕರಾಗಿದ್ದಾರೆ! ಹೌದು, ಈ ವಿಚಾರವನ್ನು ಚಿಮ್ಮನಕಟ್ಟಿಅವರು ಸಿದ್ದರಾಮಯ್ಯ ಎದುರೇ ಹೇಳಿಕೊಂಡಿದ್ದಾರೆ. ಆದರೆ, ಚಿಮ್ಮನಕಟ್ಟಿಈ ರೀತಿ ಹೇಳಿದ್ದು ತಮಾಷೆಗಾಗಿ ಅಷ್ಟೆ.

ಬಾದಾಮಿಯಲ್ಲಿ ಸೋಮವಾರ ಆಯೋಜಿಸಿದ್ದ ಕಾಂಗ್ರೆಸ್‌ ಕಾರ್ಯಕರ್ತರ ಕೃತಜ್ಞತಾ ಸಮಾರಂಭದಲ್ಲಿ ಮಾತನಾಡಿದ ಮಾಜಿ ಶಾಸಕ ಬಿ.ಬಿ.ಚಿಮ್ಮನಕಟ್ಟಿಅವರು, ಸಿದ್ದರಾಮಯ್ಯ ಅವರ ವಯಸ್ಸು 71 ಆದರೂ ಅವರ ಕೆಲಸ ಕಾರ್ಯಗಳೆಲ್ಲ 21 ವರ್ಷದ ಯುವಕನಂತೆ ಇದೆ. ಈ ಉತ್ಸಾಹ ನೋಡಿದರೆ ಅವರಿಗೆ ಮತ್ತೊಂದು ಮದುವೆ ಮಾಡಬೇಕೆಂದುಕೊಂಡಿದ್ದೇನೆ ಎಂದು ಹೇಳಿದರು. ಚಿಮ್ಮನಕಟ್ಟಿಮಾತು ಕೇಳಿ ಇಡೀ ಸಭೆ ನಗೆಗಡಲಲ್ಲಿ ತೇಲಿತು.

ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಅವರನ್ನು ಸೋಲಿಸಿದರು. ಬಾದಾಮಿಯಲ್ಲೂ ಸೋಲಿಸುವ ಪ್ರಯತ್ನ ಮಾಡಿದರೂ ನಮ್ಮ ಪ್ರಯತ್ನದ ಮುಂದೆ ಅವರ ಆಟ ನಡೆಯಲಿಲ್ಲ. ಹಗಲಿರುಳು ಶ್ರಮಿಸಿ ಸಿದ್ದರಾಮಯ್ಯನವರನ್ನು ಕ್ಷೇತ್ರದ ಶಾಸಕರನ್ನಾಗಿ ಆಯ್ಕೆ ಮಾಡಿದ ಹೆಮ್ಮೆ ಕ್ಷೇತ್ರದ ಜನತೆಗೆ ಸಲ್ಲುತ್ತದೆ. ನನಗಿಂತ ರಾಜಕೀಯದಲ್ಲಿ ತಡವಾಗಿ ಆಗಮಿಸಿದರೂ ಅವರಿಗೆ ರಾಜ್ಯದ ಮುಖ್ಯಮಂತ್ರಿಯಾಗುವ ಯೋಗ ಕೂಡಿ ಬಂತು ಎಂದು ಇದೇ ವೇಳೆ ಚಿಮ್ಮನಕಟ್ಟಿಹೇಳಿದರು.

loader