ಕೆಎಸ್ಆರ್ಟಿಸಿ ಬಸ್ ಕಂಡಕ್ಟರ್’ನೊಬ್ಬ ಪಿಯುಸಿ ಓದುತ್ತಿರುವ ಅಪ್ರಾಪ್ತೆಯನ್ನು ವಿವಾಹವಾಗಿರುವ ಘಟನೆ ಶ್ರೀರಂಗಪಟ್ಟಣದಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ಗುಂಡ್ಲುಪೇಟೆ (ಡಿ.17): ಕೆಎಸ್ಆರ್ಟಿಸಿ ಬಸ್ ಕಂಡಕ್ಟರ್’ನೊಬ್ಬ ಪಿಯುಸಿ ಓದುತ್ತಿರುವ ಅಪ್ರಾಪ್ತೆಯನ್ನು ವಿವಾಹವಾಗಿರುವ ಘಟನೆ ಶ್ರೀರಂಗಪಟ್ಟಣದಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ಕೆಎಸ್ಆರ್ಟಿಸಿ ಘಟಕದ ಬಸ್ ನಿರ್ವಾಹಕ ರವಿಕುಮಾರ್ (45), ತಾಲೂಕಿನ ಭೋಗಯ್ಯನಹುಂಡಿ ಗ್ರಾಮದ 16 ವರ್ಷದ ಅಪ್ರಾಪ್ತೆಯನ್ನು ಶ್ರೀರಂಗಪಟ್ಟಣದಲ್ಲಿ 2 ತಿಂಗಳ ಹಿಂದೆ ವಿವಾಹವಾಗಿದ್ದಾನೆ. ಈ ಸಂಬಂಧ ರವಿಕುಮಾರ್ ಮೊದಲ ಪತ್ನಿ ಪದ್ಮಾವತಿ ಎಂಬುವರು ಮೈಸೂರು ದಕ್ಷಿಣ ವಲಯದ ಪೊಲೀಸ್ ಮಹಾನಿರ್ದೇಶಕರಿಗೆ ದೂರು ಸಲ್ಲಿಸಿದ್ದಾರೆ