ಚಿಕ್ಕಮಗಳೂರು (ಆ. 04): ಕೆಫೆ ಕಾಫಿ ಡೇ ಮಾಲೀಕ ಸಿದ್ಧಾರ್ಥ ಹೆಗ್ಡೆ ಮೃತಪಟ್ಟಿರುವುದು ಅವರ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿರುವ ನೌಕರರಲ್ಲಿ ಮುಂದೇನು ಎಂಬ ಪ್ರಶ್ನೆ ಹುಟ್ಟುಹಾಕಿತ್ತು. ಆದರೆ, ಸಂಸ್ಥೆಯವರು ಆ.1 ರಂದೇ ವೇತನ ನೀಡುವ ಮೂಲಕ ನೌಕರರಲ್ಲಿ ಭದ್ರತೆಯ ಭಾವನೆ ಮೂಡಿಸಿದ್ದಾರೆ.

ಮಂಗಳೂರು: ನೇತ್ರಾವತಿ ಸೇತುವೆಗೆ ಸಿಸಿ ಟಿವಿ ಅಳವಡಿಕೆ

ಚಿಕ್ಕಮಗಳೂರಿನ ಎಬಿಸಿ ಸಂಸ್ಥೆಯಲ್ಲಿ ಕೆಲಸ ಮಾಡುವ ನೌಕರರಿಗೆ ಪ್ರತಿ ತಿಂಗಳು 5ನೇ ತಾರೀಖಿನಂದು ವೇತನ ನೀಡಲಾಗುತ್ತಿತ್ತು. ಅಲ್ಲದೆ, ಸಿದ್ಧಾರ್ಥ ಹೆಗ್ಡೆ ಅವರ ಮೂಡಿಗೆರೆ ತಾಲೂಕಿನ ಚೇತನಹಳ್ಳಿ ಎಸ್ಟೇಟ್‌ನ ಮನೆಯಲ್ಲಿ ಶನಿವಾರ ಐದನೇ ದಿನದ ವಿಧಿ ವಿಧಾನ ಕಾರ್ಯಗಳು ನಡೆದವು. ಸಿದ್ಧಾರ್ಥ ಅವರ ತಾಯಿ ವಾಸಂತಿ ಹೆಗ್ಡೆ, ಪತ್ನಿ ಮಾಳವಿಕ, ಪುತ್ರರಾದ ಅಮತ್ರ್ಯ, ಈಶಾನ್‌, ಕುಟುಂಬಸ್ಥರು ಮತ್ತು ಸಂಬಂಧಿಕರು ಭಾಗವಹಿಸಿದ್ದರು.