ಕಾಫಿನಾಡು ಚಿಕ್ಕಮಗಳೂರಿನಲ್ಲಿ ಕಳೆದ ಮೂರು ದಿನಗಳಿಂದ ಹುಲಿಗಳ ಹಾವಳಿಯಿಂದಾಗಿ ಗ್ರಾಮಸ್ಥರಲ್ಲಿ ಆತಂಕ ಮೂಡಿದೆ.

ಚಿಕ್ಕಮಗಳೂರು(ಡಿ.6): ಕಾಫಿನಾಡು ಚಿಕ್ಕಮಗಳೂರಿನಲ್ಲಿ ಕಳೆದ ಮೂರು ದಿನಗಳಿಂದ ಹುಲಿಗಳ ಹಾವಳಿಯಿಂದಾಗಿ ಗ್ರಾಮಸ್ಥರಲ್ಲಿ ಆತಂಕ ಮೂಡಿದೆ.

ಮೂಡಿಗೆರೆ ಉದುಸೆ ಗ್ರಾಮದಲ್ಲಿ ಹುಲಿಗಳು ದಾಳಿ ನಡೆಸಿ, ಎರಡು ಹಸು, ಒಂದು ಕರು ಬಲಿ ಪಡೆದಿದೆ. ಹುಲಿ ದಾಳಿಯಿಂದಾಗಿ ಹೆದರಿದ ಚಕ್ಕೊಡಿಗೆ, ಹೆಗ್ಗರವಳ್ಳಿ, ದಿಣ್ಣೆಕೆರೆ ಸುತ್ತಲಿನ ಗ್ರಾಮಸ್ಥರು ಮನೆಯಿಂದಲೇ ಹೊರ ಬರಲು ಹಿಂದೇಟು ಹಾಕುತ್ತಿದ್ದಾರೆ.

ನಾಲ್ಕು ದಿನಗಳ ಹಿಂದೆ ಬೇಟೆಯಾಡಿರೋ ಹಸುವನ್ನು ಮತ್ತೆ ಬೇರೆಡೆಗೆ ಹೊತ್ತೊಯ್ದಿದಿರುವುದು ಜನರಲ್ಲಿ ಮತ್ತಷ್ಟು ಆತಂಕ ಹೆಚ್ಚಿಸಿದೆ. ಇಷ್ಟೆಲ್ಲಾ ಆದ್ರೂ ಈ ವರೆಗೆ ಭೇಟಿ ನೀಡದ ಅರಣ್ಯಾಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.