ಚನ್ನೈ(ಅ.06): ತಮಿಳುನಾಡಿನ ಮುಖ್ಯಮಂತ್ರಿ ಜೆ.ಜಯಲಲಿತಾ ಆಸ್ಪತ್ರೆ ಸೇರಿ 14 ದಿನಗಳಾದರೂ, ರಕ್ತಸಂಬಂಧಿಗಳಿಗೂ ಅವರನ್ನು ಭೇಟಿ ಆಗುವ ಅವಕಾಶ ದೊರೆತಿಲ್ಲ.

ಜಯಲಲಿತಾ ಅವರ ಅಣ್ಣನ ಮಗಳು ದೀಪಾ ಜಯಕುಮಾರ್‌ಆಸ್ಪತ್ರೆಗೆ ತೆರಳಿದರೂ, ಗೇಟ್‌ದಾಟಲು ಅವಕಾಶ ನೀಡಿಲ್ಲ. 

ಅತ್ತೆ ಅಂದರೆ ನನಗೆ ಬಹಳ ಪ್ರೀತಿ. ಅತ್ತೆಯನ್ನು ನೋಡಲೇ ಬೇಕು. ಆದರೆ, ಆಸ್ಪತ್ರೆಯಲ್ಲಿ ಪ್ರವೇಶ ನಿರಾಕರಿಸಲಾಗಿದೆ ಅಂತ ದೀಪಾ ವ್ಯಕ್ತಪಡಿಸಿದ್ದಾರೆ.

ಎರಡು ವಾರ ಕಳೆದರೂ ಆಸ್ಪತ್ರೆಯಲ್ಲಿ ಜಯಲಲಿತಾ ಅವರನ್ನು ಭೇಟಿ ಆಗಲು ಯಾರೊಬ್ಬರಿಗೂ ಅವಕಾಶ ನೀಡದಿರುವುದು ನಿಗೂಢ ಎನಿಸಿದೆ. 

ಅವರ ಸ್ಥಿತಿ ಗಂಭೀರವಾಗಿರಬಹುದು. ಈ ವಿಷಯವನ್ನು ಏಕೆ ಮುಚ್ಚಿಡುತ್ತಿದ್ದಾರೆ ತಿಳಿಯುತ್ತಿಲ್ಲ. ಈ ಬಗ್ಗೆ ತನಿಖೆ ಆಗಬೇಕು,' ಎಂದು ದೀಪಾ ಹೇಳಿದ್ದಾರೆ. ಜಯಕುಮಾರ್‌ 1995ರಲ್ಲಿ ನಿಧನರಾದಾಗ ಸೋದರಿ ಜಯಲಲಿತಾ ಕುಟುಂಬ ಸದಸ್ಯರನ್ನು ಭೇಟಿ ಆಗಿದ್ದರು.

ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ದೀಪಾ ಸೋದರ ದೀಪಕ್‌ಎಂಬಿಎ ಪದವೀಧರರಾಗಿದ್ದು, ರಿಯಲ್‌ಎಸ್ಟೇಟ್‌ಉದ್ಯಮ ನಡೆಸುತ್ತಿದ್ದಾರೆ.