ಹುಟ್ಟುಹಬ್ಬದ ಆಚರಣೆ ವೇಳೆ ಬಾಲಕರಿಬ್ಬರು ತಂಪು ಪಾನೀಯವೆಂದು ಆಸಿಡ್ ಸೇವಿಸಿ, ಮೃತಪಟ್ಟಿರುವ ಘಟನೆ ಬೆಂಗಳೂರಿನ ಕೆ.ಆರ್ ಮಾರ್ಕೆಟ್​  ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಉತ್ತರ ಪ್ರದೇಶ ಮೂಲದ ಆರ್ಯನ್ ಸಿಂಗ್, ಸಾಹಿಲ್ ಮೃತಪಟ್ಟವರು.

ಬೆಂಗಳೂರು(ಸೆ.28): ಹುಟ್ಟುಹಬ್ಬದ ಆಚರಣೆ ವೇಳೆ ಬಾಲಕರಿಬ್ಬರು ತಂಪು ಪಾನೀಯವೆಂದು ಆಸಿಡ್ ಸೇವಿಸಿ, ಮೃತಪಟ್ಟಿರುವ ಘಟನೆ ಬೆಂಗಳೂರಿನ ಕೆ.ಆರ್ ಮಾರ್ಕೆಟ್​ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಉತ್ತರ ಪ್ರದೇಶ ಮೂಲದ ಆರ್ಯನ್ ಸಿಂಗ್, ಸಾಹಿಲ್ ಮೃತಪಟ್ಟವರು.

ಸಂಜಯ್ ಸಿಂಗ್ ಹಾಗೂ ಅಂಜು ದಂಪತಿ ಪುತ್ರ ಆರ್ಯನ್ ಸಿಂಗ್, ನಿನ್ನೆ ತಡರಾತ್ರಿ ಗೆಳೆಯ ಸಾಹಿಲ್ ನ ಹುಟ್ಟುಹಬ್ಬದ ಆಚರಣೆಗೆ ಬಂದಿದ್ದ. ಹುಟ್ಟು ಹಬ್ಬದ ಕೇಕ್ ತಿಂದು ಆರ್ಯನ್ ತಂಪು ಪಾನೀಯ ಎಂದುಕೊಂಡು ಸ್ನೇಹಿತ ಸಾಹಿಲ್ ಜತೆ ಸೇರಿ ಆಭರಣ ಕರಗಿಸುವ ಆಸಿಡ್ ಕುಡಿದಿದ್ದಾನೆ. ನಂತರ ಮಕ್ಕಳು ಅಸ್ವಸ್ತರಾಗುತ್ತಿದ್ದಂತೆ ಪೋಷಕರು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮಕ್ಕಳಿಬ್ಬರು ಮೃತಪಟ್ಟಿದ್ದಾರೆ.

ಮಕ್ಕಳ ಪೋಷಕರು ಬಂಗಾರ, ಬೆಳ್ಳಿ ಆಭರಣ ಕೆಲಸ ಮಾಡಿಕೊಂಡಿದ್ದು, ಆಸಿಡ್​ನ್ನು ಮನೆಯಲ್ಲಿ ಇಟ್ಟುಕೊಂಡಿದ್ದರು. ಈ ಕುರಿತು ಕೆ.ಆರ್ ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.