ನೋಟು ನಿಷೇಧ ಮಾಡಿ ಇಂದಿಗೆ 50 ದಿನಗಳು ಕಳೆದಿವೆ. ಪ್ರಧಾನಿ ಹೇಳಿದಂತೆ ಯಾವ ಬದಲಾವಣೆಯೂ ಆಗಿಲ್ಲ; ರೈತರು, ಜನಸಾಮಾನ್ಯರು ನರಳುತ್ತಿದ್ದಾರೆ ಎಂದು ಚಿದಂಬರಂ ಹೇಳಿದ್ದಾರೆ.

ನವದೆಹಲಿ (ಡಿ.30): ಕೇಂದ್ರ ಸರ್ಕಾರ ಕೈಗೊಂಡಿರುವ ನೋಟು ನಿಷೇಧ ಕ್ರಮ ಸಂಪೂರ್ಣವಾಗಿ ವಿಫಲವಾಗಿದೆ ಎಂದು ಆರ್ಥಿಕ ತಜ್ಞ ಹಾಗೂ ಮಾಜಿ ಹಣಕಾಸು ಸಚಿವ ಪಿ.ಚಿದಂಬರಂ ಹೇಳಿದ್ದಾರೆ.

ನೋಟು ನಿಷೇಧ ಮಾಡಿ ಇಂದಿಗೆ 50 ದಿನಗಳು ಕಳೆದಿವೆ. ಪ್ರಧಾನಿ ಹೇಳಿದಂತೆ ಯಾವ ಬದಲಾವಣೆಯೂ ಆಗಿಲ್ಲ; ರೈತರು, ಜನಸಾಮಾನ್ಯರು ನರಳುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.

ನೋಟು ಅಮಾನ್ಯ ಮಾಡುವ ಕ್ರಮವು ರಾಜಕೀಯ ಉದ್ದೇಶದಿಂದ ತೆಗೆದುಕೊಂಡ ನಿರ್ಧಾರವಾಗಿದೆ ಎಂದಿರುವ ಚಿದಂಬರಂ, ಪ್ರಧಾನಿ ಮೋದಿ ದೇಶದ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದ್ದಾರೆ.