ಐಎನ್ಎಕ್ಸ್ ಮೀಡಿಯಾ ಭ್ರಷ್ಟಾಚಾರ ಪ್ರಕರಣ| 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಪಿ ಚಿದಂಬರಂ| ತಿಹಾರ್ ಜೈಲಿಗೆ ಪಿ. ಚಿದಂಬರಂ| ಸಿಬಿಐ ಕಸ್ಟಡಿ ಅವಧಿ ಇಂದಿಗೆ ಮುಕ್ತಾಯಗೊಂಡ ಹಿನ್ನಲೆ| ಸೆಪ್ಟೆಂಬರ್ 19ರವರೆಗೆ ತಿಹಾರ್ ಜೈಲಿನಲ್ಲಿರಲಿದ್ದಾರೆ ಚಿದಂಬರಂ| ದೇಶದ ಅರ್ಥ ವ್ಯವಸ್ಥೆ ಬಗ್ಗೆ ಚಿಂತಾಕ್ರಾಂತರಾಗಿದ್ದಾರಂತೆ ಚಿದಂಬರಂ | ಶೇ.5ರಷ್ಟು ಎಂದು ಬೆರಳು ತೋರಿ ವ್ಯಂಗ್ಯವಾಡಿದ ಚಿದಂಬರಂ|

ನವದೆಹಲಿ(ಸೆ.06): ಐಎನ್ಎಕ್ಸ್ ಮೀಡಿಯಾ ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಕೇಂದ್ರ ಸಚಿವ ಪಿ. ಚಿದಂಬರಂ ಅವರನ್ನು ದೆಹಲಿ ಕೋರ್ಟ್ ನ್ಯಾಯಾಂಗ ಬಂಧನಕ್ಕೆ ಆದೇಶಿಸಿದೆ.

ಈ ಹಿನ್ನೆಲೆಯಲ್ಲಿ ಚಿದಂಬರಂ ಅವರನ್ನು ಸೆಪ್ಟೆಂಬರ್ 19ರವರೆಗೆ ತಿಹಾರ್ ಜೈಲಿಗೆ ಕಳುಹಿಸಲಾಗಿದೆ. ಈಗಾಗಲೇ ತಿಹಾರ್ ಜೈಲಿನ ವಿಶೇಷ ಸೆಲ್’ನಲ್ಲಿರುವ ಚಿದಂಬರಂ, ಮುಂದಿನ 14 ದಿನಗಳನ್ನು ಜೈಲಿನಲ್ಲೇ ಕಳೆಯಲಿದ್ದಾರೆ.

ಈ ಮಧ್ಯೆ ದೆಹಲಿ ವಿಶೇಷ ಕೋರ್ಟ್ ನ್ಯಾಯಾಂಗ ಬಂಧನಕ್ಕೆ ಆದೇಶ ನೀಡಿದ ಬಳಿಕ ಹೊರಬಂದ ಚಿದಂಬರಂ, ಈ ಕುರಿತು ಕೇಳಲಾದ ಪ್ರಶ್ನೆಗೆ ತಾವು ದೇಶದ ಅರ್ಥ ವ್ಯವಸ್ಥೆ ಬಗ್ಗೆ ಮಾತ್ರ ಚಿಂತಾಕ್ರಾಂತರಾಗಿರುವುದಾಗಿ ಮಾರ್ಮಿಕವಾಗಿ ತಿಳಿಸಿದ್ದಾರೆ.

Scroll to load tweet…

ಪ್ರಕರಣಕ್ಕೆ ಸಂಬಂಧಿಸಿದಂತೆ ತಾವು ಜೈಲಿಗೆ ಹೋಗುತ್ತಿರುವುದರ ಕುರಿತು ತಾವು ತಲೆ ಕೆಡಿಸಿಕೊಳ್ಳುತ್ತಿಲ್ಲ, ಬದಲಿಗೆ ದೇಶದ ಅರ್ಥ ವ್ಯವಸ್ಥೆ ದಿನದಿಂದ ದಿನಕ್ಕೆ ಕುಸಿಯುತ್ತಿದ್ದು ಈ ಕುರಿತು ಚಿಂತಾಕ್ರಾಂತರಾಗಿರುವುದಾಗಿ ಚಿದಂಬರಂ ಹೇಳಿದ್ದಾರೆ.

ಪತ್ರಕರ್ತರ ಮುಂದೆ ಶೇ.5 ಎಂದು ಬೆರಳು ಮಾಡಿ ತೋರಿದ ಚಿದಂಬರಂ, ಮೋದಿ ಸರ್ಕಾರದ ಜಿಡಿಪಿ ಬೆಳವಣಿಗೆಯನ್ನು ವ್ಯಂಗ್ಯವಾಡಿದರು. ದೇಶದ ಜಿಡಿಪಿ ಕಳೆದ 6 ವರ್ಷದಲ್ಲೇ ಅತ್ಯಂತ ಕಡಿಮೆ ದಾಖಲಾಗಿರುವುದನ್ನು ಇಲ್ಲಿ ಸ್ಮರಿಸಬಹುದು.