Asianet Suvarna News Asianet Suvarna News

ಚಿದಂಬರಂಗೆ ಬೇರೆ ದಾರಿಯಿಲ್ಲ ಸಿಬಿಐಗೆ ಸಹಕರಿಸಬೇಕು: ರವಿ ಶಂಕರ್ ಪ್ರಸಾದ್

ಕೇಂದ್ರ ಸರ್ಕಾರ ನಮ್ಮನ್ನು ಗುರಿಯಾಗಿಸಿಕೊಂಡು ನನ್ನ ಹಾಗೂ ಮಗನ ಮನೆ ಮೇಲೆ ಐಟಿ ದಾಳಿ ಮಾಡಿಸಿದೆ ಎನ್ನುವ ಚಿದಂಬರಂ ಆರೋಪಕ್ಕೆ ಕೇಂದ್ರ ಕಾನೂನು ಸಚಿವ ರವಿಶಂಕರ್ ಪ್ರಸಾದ್ ತಿರುಗೇಟು ನೀಡಿದ್ದಾರೆ. ಸಿಬಿಐ ದಾಳಿಯನ್ನು ಸಮರ್ಥಿಸಿಕೊಳ್ಳುತ್ತಾ, ಅವರಿಂದ ಮತ್ತೇನನ್ನೂ ನಿರೀಕ್ಷಿಸಲು ಸಾಧ್ಯವಿಲ್ಲವೆಂದು ಪ್ರಸಾದ್ ವ್ಯಂಗ್ಯವಾಡಿದ್ದಾರೆ.

Chidambaram Has no choice But Cooperate with CBI says Ravi Shankar Prasad

ನವದೆಹಲಿ (ಮೇ.16): ಕೇಂದ್ರ ಸರ್ಕಾರ ನಮ್ಮನ್ನು ಗುರಿಯಾಗಿಸಿಕೊಂಡು ನನ್ನ ಹಾಗೂ ಮಗನ ಮನೆ ಮೇಲೆ ಐಟಿ ದಾಳಿ ಮಾಡಿಸಿದೆ ಎನ್ನುವ ಚಿದಂಬರಂ ಆರೋಪಕ್ಕೆ ಕೇಂದ್ರ ಕಾನೂನು ಸಚಿವ ರವಿಶಂಕರ್ ಪ್ರಸಾದ್ ತಿರುಗೇಟು ನೀಡಿದ್ದಾರೆ. ಸಿಬಿಐ ದಾಳಿಯನ್ನು ಸಮರ್ಥಿಸಿಕೊಳ್ಳುತ್ತಾ, ಅವರಿಂದ ಮತ್ತೇನನ್ನೂ ನಿರೀಕ್ಷಿಸಲು ಸಾಧ್ಯವಿಲ್ಲವೆಂದು ಪ್ರಸಾದ್ ವ್ಯಂಗ್ಯವಾಡಿದ್ದಾರೆ.

ಚಿದಂಬರಂರವರಿಂದ ಇದನ್ನು ಹೊರತಾಗಿ ಮತ್ತೇನೂ ನಿರೀಕ್ಷಿಸಲು ಸಾಧ್ಯವಿಲ್ಲ. ಅವರ ಮಗನ ಆಸ್ತಿಗೆ ಅವರೇ ಹೊಣೆಗಾರರು. ಸಿಬಿಐ ಪ್ರಶ್ನೆಗಳಿಗೆ ಅವರೇ ಉತ್ತರಿಸಬೇಕು ಜೊತೆಗೆ ವಿಚಾರಣೆಗೆ ಸಹಕರಿಸಬೇಕು ಎಂದು ರವಿಶಂಕರ್ ಹೇಳಿದ್ದಾರೆ.

ಚೆನ್ನೈನ  ನುಂಗಬಾಕಂ ಪ್ರದೇಶಗಳಲ್ಲಿರುವ ಮನೆ ಮೇಲೆ ಸುಮಾರು 10 ಕ್ಕೂ ಹೆಚ್ಚು ಹಿರಿಯ ಸಿಬಿಐ ಅಧಿಕಾರಿಗಳಿಂದ ದಾಳಿ ನಡೆದಿದೆ. ಬೇನಾಮಿ ಆಸ್ತಿ ಗಳಿಕೆ, ಏರ್​ಸೆಲ್-ಮ್ಯಾಕ್ಸಿಸ್​ ಕಂಪನಿಯಲ್ಲಿ ಅಕ್ರಮವಾಗಿ ಹಣ ಹೂಡಿಕೆ, ಹಣ ವರ್ಗಾವಣೆ ನಿಯಮ ಉಲ್ಲಂಘನೆ ಹಾಗೂ 45 ಕೋಟಿ ರೂಪಾಯಿ ಕಾನೂನು ಬಾಹಿರ ಹೂಡಿಕೆ ಆರೋಪದಡಿ ಸಿಬಿಐ ದಾಳಿ ನಡೆದಿದೆ.

ಕೇಂದ್ರ ಸರ್ಕಾರವು ನಮ್ಮನ್ನು ಗುರಿಯಾಗಿಟ್ಟುಕೊಂಡೇ ಐಟಿ ದಾಳಿ ನಡೆಸಿದೆ ಎಂದು ಚಿದಂಬರಂ ಆರೋಪಿಸಿದ್ದಾರೆ.   

Follow Us:
Download App:
  • android
  • ios