ಹೌದು ಕೋಳಿ ಪ್ರಿಯರಿಗೆ ಮತ್ತೆ ನಿರಾಸೆಯ ದಿನಗಳು ಶುರುವಾಗಿವೆ. ಚಿಕನ್ ಇಲ್ಲದೇ ಊಟವೇ ಕಂಪ್ಲೀಟ್ ಆಗೊಲ್ಲಾ ಅನ್ನೋರಿಗೆ, ಇದೀಗ ಹಕ್ಕಿ ಜ್ವರದ ಭಯ ಶುರುವಾಗಿದೆ. ಗಣಿನಾಡು

ಒಂದೆಡೆ ರಾಶಿ ರಾಶಿ ಕೋಳಿಗಳು. ಇನ್ನೊಂದೆಡೆ ಮಾಸ್ಕ್, ಗ್ಲೌಸ್, ಮುಸುಕುದಾರಿ ಅಧಿಕಾರಿಗಳು. ಮತ್ತೊಂದೆಡೆ ಸತ್ತು ಮಲಗಿರುವ ಕೋಳಿಗಳು... ಈ ದೃಶ್ಯ ಕಂಡುಬಂದಿದ್ದು ಬಳ್ಳಾರಿ ಜಿಲ್ಲೆಯಲ್ಲಿ.

ಹೌದು ಕೋಳಿ ಪ್ರಿಯರಿಗೆ ಮತ್ತೆ ನಿರಾಸೆಯ ದಿನಗಳು ಶುರುವಾಗಿವೆ. ಚಿಕನ್ ಇಲ್ಲದೇ ಊಟವೇ ಕಂಪ್ಲೀಟ್ ಆಗೊಲ್ಲಾ ಅನ್ನೋರಿಗೆ, ಇದೀಗ ಹಕ್ಕಿ ಜ್ವರದ ಭಯ ಶುರುವಾಗಿದೆ. ಗಣಿನಾಡು ಬಳ್ಳಾರಿ ಜಿಲ್ಲೆಯಲ್ಲಿ ಹಕ್ಕಿಜ್ವರ ಕಾಣಿಸಿಕೊಂಡಿದೆ. ಬಳ್ಳಾರಿಯ ಕಂಪ್ಲಿ ಸಮೀಪದ 10 ಕಿಲೋ ಮೀಟರ್ ವ್ಯಾಪ್ತಿಯಲ್ಲಿ ಹಕ್ಕಿಜ್ವರ ಭೀತಿ ಎದುರಾಗಿದೆ. ಈ ಕಾರಣದಿಂದಾಗಿ ಈ ಪ್ರದೇಶದಲ್ಲಿ ಮೊಟ್ಟೆ , ಮಾಂಸ ಮಾರಟವನ್ನು ನಿಷೇಧ ಮಾಡಲಾಗಿದೆ.

450 ಕೋಳಿಗಳು ಸಂಶಯಾಸ್ಪದವಾಗಿ ಸಾವು! : ಕೋಳಿಗಳ ಸಾವಿಗೆ ಎಚ್ 5 ಎನ್8 ಕಾರಣ!

ಕಳೆದ ಮೂರು ದಿನಗಳಿಂದ 450 ಕೋಳಿಗಳು ಸಂಶಯಾಸ್ವದವಾಗಿ ಸಾವನ್ನಪ್ಪಿವೆ. ಕೋಳಿಗಳ ಸಾವಿಗೆ ಎಚ್ 5 ಎನ್ 8 ಕೋಳಿಜ್ವರ ಕಾರಣ ಎಂದು ಧೃಡ ಪಡಿಸಲಾಗಿದೆ. ವಿಷಯ ತಿಳಿದ ಪಶು ಸಂಗೋಪನಾ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಷ್ಟೇ ಅಲ್ಲದೇ ಬಳ್ಳಾರಿಯ ಕಂಪ್ಲಿ ಸಮೀಪ ತಾತ್ಕಾಲಿಕ ಚಿಕ್ಸಿತ್ಸಾ ಕೇಂದ್ರವನ್ನು ಕೂಡ ಸ್ಥಾಪನೆ ಮಾಡಿದ್ದಾರೆ.

ಒಟ್ನಲ್ಲಿ ಮತ್ತೆ ಹಕ್ಕಿ ಜ್ವರ ಕಾಣಿಸಿಕೊಂಡಿರೋದ್ರಿಂದ ಜನರು ಆತಂಕಕ್ಕೊಳಗಾಗಿದ್ದಾರೆ. ಶೀಘ್ರವೇ ಸಂಬಂಧಪಟ್ಟ ಅಧಿಕಾರಿಗಲು ಹಕ್ಕಿ ಜ್ವರ ತಡೆಗೆ ಅಗತ್ಯ ಕ್ರಮ ಕೈಗೊಳ್ಳಬೇಕಾಗಿದೆ.

ವರದಿ: ಶ್ರೀನಿವಾಸ ಶೆಟ್ಟಿ, ಸುವರ್ಣ ನ್ಯೂಸ್