ಜೊತೆಗೆಪೌಷ್ಠಿಕಾಂಶ ಭರಿತ ಆಹಾರಗಳಾದ ಎಗ್ ಪ್ರೊಟೀನ್ ಬಿಸ್ಕೆಟ್, ಕಬ್ಬಿಣಾಂಶ ಮತ್ತು ಪ್ರೋಟಿನ್ ಭರಿತ ಆಹಾರದ ಗಟ್ಟಿ, ಪ್ರೊಟೀನ್ ಹೊಂದಿರುವ ಚಾಕೋಲೇಟ್ ಮತ್ತು ಚಿಕನ್ ಕಟ್ಟಿ ರೋಲ್ಗಳನ್ನು ಡಿಆರ್ಡಿಒ ತಯಾರಿಸಿದೆ 

ನವದೆಹಲಿ(ಜು.22): ಹಿಮಾಲಯದ ಎತ್ತರದ ಪ್ರದೇಶಗಳಲ್ಲಿ ಮತ್ತು ಹಿಮ ಬೀಳುವ ಪ್ರದೇಶದಲ್ಲಿ ಸೇವೆ ಸಲ್ಲಿಸುವ ಯೋಧರಿಗಾಗಿ ಚಿಕನ್ ಬಿಸ್ಕೆಟ್, ದಣಿವಾರಿಸಲು ತುಳಸಿಯ ಬಾರ್ ಮತ್ತು ಪ್ರೊಟೀನ್ ಭರಿತ ಮಟನ್ ಬಾರ್ಗಳನ್ನು ರಕ್ಷಣೆ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್ಡಿಒ) ಸಿದ್ಧಪಡಿಸಿದೆ. ಜೊತೆಗೆಪೌಷ್ಠಿಕಾಂಶ ಭರಿತ ಆಹಾರಗಳಾದ ಎಗ್ ಪ್ರೊಟೀನ್ ಬಿಸ್ಕೆಟ್, ಕಬ್ಬಿಣಾಂಶ ಮತ್ತು ಪ್ರೋಟಿನ್ ಭರಿತ ಆಹಾರದ ಗಟ್ಟಿ, ಪ್ರೊಟೀನ್ ಹೊಂದಿರುವ ಚಾಕೋಲೇಟ್ ಮತ್ತು ಚಿಕನ್ ಕಟ್ಟಿ ರೋಲ್ಗಳನ್ನು ಡಿಆರ್ಡಿಒ ತಯಾರಿಸಿದೆ ಎಂದು ರಕ್ಷಣೆ ಖಾತೆ ರಾಜ್ಯ ಸಚಿವ ಸುಭಾಷ್ ಭಾಮ್ರೆ ಅವರು ಲೋಕಸಭೆಗೆ ಈಮಾಹಿತಿ ನೀಡಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred