Asianet Suvarna News Asianet Suvarna News

ಪತ್ರಕರ್ತನ ಕೊಲೆ ಪ್ರಕರಣ : ಪಾತಕಿ ರಾಜನ್'ಗೆ ಜೀವಾವಧಿ ಶಿಕ್ಷೆ

ಪತ್ರಕರ್ತ ಜೆ. ಡೇ ಅವರು ಜೂನ್ 11,2011 ರಂದು ಮುಂಬೈ'ನ ಪೊವಾಯ್'ನಲ್ಲಿ ಹತ್ಯೆಯಾಗಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಾಸಿಕ್ಯೂಷನ್ 155 ಸಾಕ್ಷಿಗಳ ವಿಚಾರಣೆ ನಡೆಸಿತ್ತು. ಇದರಲ್ಲಿ 10 ಮಂದಿ ಪ್ರತಿಕೂಲ ಸಾಕ್ಷಿಗಳಾಗಿದ್ದರೆ 15 ಸಾಕ್ಷಿಗಳು ಮೃತಪಟ್ಟಿದ್ದು,ಇಬ್ಬರು ತಪ್ಪಿಸಿಕೊಂಡಿದ್ದಾರೆ. 

Chhota Rajan gets life imprisonment in Jyotirmoy Dey murder case

ಮುಂಬೈ(ಮೇ.02): ಪತ್ರಕರ್ತ ಜೆ.ಡೇ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ  ಮುಂಬೈ ಮೊಕ್ಕಾ ಕೋರ್ಟ್ ಭೂಗತ ಪಾತಕಿ ಚೋಟಾ ರಾಜನ್ ಹಾಗೂ ಶಾರ್ಪ್ ಶೂಟರ್ ಸತೀಶ್ ಕಾಲಿಯಾಗೆ ಜೀವಾವಧಿ ಶಿಕ್ಷೆ ವಿಧಿಸಿದೆ. 
ಇದೇ ಪ್ರಕರಣದಲ್ಲಿ ಮತ್ತೊಬ್ಬ ಪತ್ರಕರ್ತ ಜಿಗ್ನಾ ವೋರಾ ಹಾಗೂ ಮತ್ತೊಬ್ಬ ಶಂಕಿತನನ್ನು ಖುಲಾಸೆಗೊಳಿಸಲಾಗಿದೆ.  ಪತ್ರಕರ್ತ ಜೆ. ಡೇ ಅವರು ಜೂನ್ 11,2011 ರಂದು ಮುಂಬೈ'ನ ಪೊವಾಯ್'ನಲ್ಲಿ ಹತ್ಯೆಯಾಗಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಾಸಿಕ್ಯೂಷನ್ 155 ಸಾಕ್ಷಿಗಳ ವಿಚಾರಣೆ ನಡೆಸಿತ್ತು. ಇದರಲ್ಲಿ 10 ಮಂದಿ ಪ್ರತಿಕೂಲ ಸಾಕ್ಷಿಗಳಾಗಿದ್ದರೆ 15 ಸಾಕ್ಷಿಗಳು ಮೃತಪಟ್ಟಿದ್ದು,ಇಬ್ಬರು ತಪ್ಪಿಸಿಕೊಂಡಿದ್ದಾರೆ. 
11 ಮಂದಿಯ ಮೇಲೆ ಆರೋಪಪಟ್ಟಿ ಹೊರಿಸಲಾಗಿತ್ತು. ಪತ್ರಕರ್ತ ಜೆ.ಡೇ  ಅಂತರರಾಷ್ಟ್ರೀಯ ಪಾತಕಿ  ದಾವೂದ್ ಇಬ್ರಾಹಿಂ ಪರವಾಗಿ ಕಾರ್ಯ ನಿರ್ವಹಿಸುತ್ತಿದ್ದ ಎಂಬ ಶಂಕೆಯ ಮೇಲೆ ಚೋಟಾರಾಜನ್  ಕೊಲೆ ಮಾಡಿಸಿದ್ದ ಎಂಬುದು ಆರೋಪಪಟ್ಟಿಯಲ್ಲಿ ದಾಖಲಾಗಿದೆ.  ಮೇ 30, 2011 ರಂದು  ರಾಜನ್ ದಾವೂದ್ ಇಬ್ರಾಹಿಂ'ನನ್ನು ಕೊಲೆ ಮಾಡಲು ಯೋಜನೆ ರೂಪಿಸಿದ್ದಾನೆ ಎಂಬ ಶೀರ್ಷಿಕೆಯ ಮೇಲೆ ಡೇ ಅವರು ಪತ್ರಿಕೆಯಲ್ಲಿ ಲೇಖನ ಬರೆದಿದ್ದರು. ಇದು ಕೊಲೆಗೆ ಪ್ರಮುಖ ಕಾರಣ ಎಂಬುದು ಆರೋಪಪಟ್ಟಿಯಲ್ಲಿದೆ.

Follow Us:
Download App:
  • android
  • ios