Asianet Suvarna News Asianet Suvarna News

ಮಂಡ್ಯದ ವಿಳಾಸದಲ್ಲಿ ನಕಲಿ ಪಾಸ್'ಪೋರ್ಟ್: ಚೋಟಾ ರಾಜನ್'ಗೆ 7 ವರ್ಷ ಜೈಲು

ಶಿಕ್ಷೆಯ ಜೊತೆ ಪ್ರತಿಯೊಬ್ಬರಿಗೂ 15 ಸಾವಿರ ದಂಡ ವಿಧಿಸಲಾಗಿದೆ. ಸಿಬಿಐ ವಿಶೇಷ ನ್ಯಾಯಾಧೀಶರಾದ  ವೀರೇಂದ್ರ ಕುಮಾರ್ ಗೋಯಲ್ ಅವರು ಪಾಟಿಯಾಲ ಹೌಸ್ ಕೋರ್ಟ್'ನಲ್ಲಿ ಅಪರಾಧಿಗಳೆಂದು ಘೋಷಿಸಿ ಶಿಕ್ಷೆ ವಿಧಿಸಿದರು.

Chhota Rajan 3 others awarded 7 year jail term in fake passport case

ನವದೆಹಲಿ(ಏ.25): ಮಂಡ್ಯದ ವಿಳಾಸದಲ್ಲಿ ಮೋಹನ್ ಕುಮಾರ್ ಎಂಬ ಹೆಸರಿನಲ್ಲಿ 1998-99ರಲ್ಲಿ ನಕಲಿ ಪಾಸ್'ಪೋರ್ಟ್ ಪಡೆದಿದ್ದ ಆರೋಪಕ್ಕೆ ಸಂಬಂಧಿಸಿದಂತೆ ಸಿಬಿಐ ನ್ಯಾಯಾಲಯ ಭೂಗತ ಪಾತಕಿ ಚೋಟಾ ರಾಜನ್' ಹಾಗೂ ಈತನಿಗೆ ಸಹಾಯ ಮಾಡಿದ ಕಾರಣಕ್ಕಾಗಿ ಮೂವರು ಮಾಜಿ ಪಾಸ್'ಪೋರ್ಟ್ ಅಧಿಕಾರಿಗಳಿಗೆ 7 ವರ್ಷಗಳ ಕಾಲ ಕಾರಾಗೃಹ ಶಿಕ್ಷೆ ವಿಧಿಸಿದೆ.

ಶಿಕ್ಷೆಯ ಜೊತೆ ಪ್ರತಿಯೊಬ್ಬರಿಗೂ 15 ಸಾವಿರ ದಂಡ ವಿಧಿಸಲಾಗಿದೆ. ಸಿಬಿಐ ವಿಶೇಷ ನ್ಯಾಯಾಧೀಶರಾದ  ವೀರೇಂದ್ರ ಕುಮಾರ್ ಗೋಯಲ್ ಅವರು ಪಾಟಿಯಾಲ ಹೌಸ್ ಕೋರ್ಟ್'ನಲ್ಲಿ ಅಪರಾಧಿಗಳೆಂದು ಘೋಷಿಸಿ ಶಿಕ್ಷೆ ವಿಧಿಸಿದರು.

ಇವರ ಮೇಲೆ ವಂಚನೆ,ದಾಖಲೆ ತಿರುಚುವಿಕೆ,ಉದ್ದೇಶಪೂರ್ವಕವಾಗಿ ದಾಖಲೆ ತಿರುಚುವಿಕೆ, ಒಳ ಸಂಚು ಮುಂತಾದ ಪ್ರಕರಣದಲ್ಲಿ ಶಿಕ್ಷೆ ವಿಧಿಸಲಾಗಿದೆ. ರಾಜನ್ ವಿರುದ್ದ ದೇಶಾದ್ಯಂತ 85ಕ್ಕೂ ಹೆಚ್ಚು ವಿವಿಧ ಆರೋಪಗಳ ಪ್ರಕರಣಗಳಿವೆ.   

Follow Us:
Download App:
  • android
  • ios