ಸುದ್ದಿಯನ್ನು ಖಚಿತಪಡಿಸಿಕೊಂಡು ತಕ್ಷಣ ಟೀವಿ ಸ್ಟುಡಿಯೋ ಕಚೇರಿಯಿಂದ ಕಾಲ್ಕಿತ್ತಿದ್ದಾಳೆ.

ರಾಯ್'ಪುರ್(ಏ.08): ಟೀವಿ ಚಾನಲ್' ಒಂದರಲ್ಲಿ ಮನಕುಲುಕುವ ಘಟನೆ ನಡೆದಿದೆ.

ಆ್ಯಂಕರ್ ಒಬ್ಬಳು ತನ್ನ ಗಂಡನ ಸಾವಿನ ಸುದ್ದಿಯನ್ನೇ ಬ್ರೇಕಿಂಗ್ ನ್ಯೂಸ್'ನಲ್ಲಿ ಓದಿದ್ದಾಳೆ. ಛತ್ತೀಸ್'ಘಡದ ಖಾಸಗಿ ಚಾನೆಲ್ ಐಬಿಸಿ-24ನಲ್ಲಿ ನ್ಯೂಸ್ ಆ್ಯಂಕರ್ ಆಗಿ ಕೆಲಸ ಮಾಡುವ ಸುರ್'ಪ್ರೀತ್ ಕೌರ್ ಇಂದು ಬೆಳಿಗ್ಗೆ ಲೈನಲ್ಲಿ ನ್ಯೂಸ್ ಓದುವಾಗ ವರದಿಗಾರನೊಬ್ಬ ಮಹಾಸಮುಂದ್ ಜಿಲ್ಲೆಯ ಪಿತಾರಾ ಪಟ್ಟಣದಲ್ಲಿ ಡಸ್ಟರ್ ಕಾರು ಅಪಘಾತಗೊಂಡು ಮೂವರು ಮೃತಪಟ್ಟಿರುವ ಸುದ್ದಿಯನ್ನು ಫೋನ್'ನಲ್ಲಿ ತಿಳಿಸಿದ್ದಾನೆ. ಆ್ಯಂಕರ್ ಅದೇ ಸುದ್ದಿಯನ್ನು ಬ್ರೇಕಿಂಗ್ ಆಗಿ ಓದಿದ್ದಾಳೆ.

ನ್ಯೂಸ್ ಲೈವ್ ಓದಿ ಮುಗಿಸಿದ ಆ್ಯಂಕರ್'ಗೆ ಅದು ತನ್ನ ಗಂಡ ಪ್ರಯಾಣಿಸುತ್ತಿದ್ದ ಕಾರು ಎಂದು ಗೊತ್ತಾಗಿದೆ. ಸುದ್ದಿಯನ್ನು ಖಚಿತಪಡಿಸಿಕೊಂಡು ತಕ್ಷಣ ಟೀವಿ ಸ್ಟುಡಿಯೋ ಕಚೇರಿಯಿಂದ ಕಾಲ್ಕಿತ್ತಿದ್ದಾಳೆ. ಸ್ಥಳಕ್ಕೆ ಹೋಗಿ ನೋಡಿದಾಗ ಅದು ತನ್ನ ಗಂಡನ ಸಾವು ಎಂಬುದು ಗೊತ್ತಾಗಿದೆ.