ದೇಶದ ಕೆಲ ರಾಜ್ಯಗಳು ಚುನಾವಣೆಗೆ ಸಜ್ಜಾಗುತ್ತಿವೆ. ಪ್ರತಿಯೊಂದು ಪಕ್ಷಗಳು ತಮ್ಮ ಬಲವರ್ಧನೆಗೆ ಮುಂದಾಗುತ್ತಿದ್ದು  ಬೇರೆ ಬೇರೆ ಪಕ್ಷಗಳಿಂದ ನಾಯಕರನ್ನು ಬರಮಾಡಿಕೊಳ್ಳುತ್ತಿವೆ. 

ರಾಯ್ ಪುರ(ಅ.13)  ಛತ್ತೀಸ್ ಗಡ ಕಾಂಗ್ರೆಸ್ ಕಾರ್ಯಾಧ್ಯಕ್ಷ ರಾಮ್ ದಯಾಳ್ ಉಯ್ಕೆ ಬಿಜೆಪಿ ಸೇರಿದ್ದಾರೆ. ಈ ಮೂಲಕ ಪ್ರಭಾವಿ ಆದಿವಾಸಿ ನಾಯಕರನ್ನೊಬ್ಬರನ್ನು ಬಿಜೆಪಿ ತನ್ನ ತಂಡಕ್ಕೆ ಸೇರಿಸಿಕೊಂಡಿದೆ.

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಹಾಗೂ ಮುಖ್ಯಮಂತ್ರಿ ರಮಣ್ ಸಿಂಗ್ ನೇತೃತ್ವದಲ್ಲಿ ಬಿಲಾಸ್ ಪುರ್ ದಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಮ್ ದಯಾಳ್ ಬಿಜೆಪಿ ಸೇರಿದರು.

ಇದನ್ನು ಘರ್ ವಾಪಸಿ ಎಂದಿರುವ ರಾಮ್ ದಯಾಳ್ ಬಿಜೆಪಿಯೊಂದಿಗೆ ನನ್ನ ಮುಂದಿನ ರಾಜಕಾರಣದ ಜೀವನ ಎಂದಿದ್ದಾರೆ. 2000ನೇ ಇಸವಿಯಲ್ಲಿ ಬಿಜೆಪಿ ತೊರೆದಿದ್ದ ಉಯ್ಕೆ ಕಾಂಗ್ರೆಸ್ ಸೇರಿದ್ದರು. ಕಾಂಗ್ರೆಸ್ ನಾಯಕರ ವರ್ತನೆಯಿಂದ ಬೇಸತ್ತು ಮತ್ತೆ ಬಿಜೆಪಿ ಸೇರಿದ್ದು ಚುನಾವಣೆ ಸಂದರ್ಭದಲ್ಲಿ ಮಹತ್ವ ಪಡೆದುಕೊಂಡಿದೆ.

ಉಯ್ಕೆ ಸೇರ್ಪಡೆಯಿಂದಾಗಿ ಬಿಜೆಪಿಗೆ ಮತ್ತಷ್ಟು ಬಲ ಬಂದಿದೆ, ಬಿಜೆಪಿ ಮಿಷನ್ 65 ಸಾಧಸಲು ಇದು ನೆರವಾಗುತ್ತದೆ ಎಂಬುದು ಬಿಜೆಪಿ ನಾಯಕರ ಮಾತು. ಆದರೆ ಈ ಬೆಳವಣಿಗೆಗೆ ಕಾಂಗ್ರೆಸ್ ಅಚ್ಚರಿ ವ್ಯಕ್ತ ಪಡಿಸಿದೆ.

Scroll to load tweet…