ಈ ಬಗ್ಗೆ ಖ್ಯಾತ ಲೇಖಕ ಚೇತನ್ ಭಗತ್ ಒಂದಷ್ಟು ಮಾಹಿತಿಗಳನ್ನು ಕಲೆಹಾಕುವ ಸಲುವಾಗಿ ಟ್ವಿಟ್ಟರ್'ನಲ್ಲಿ ಪ್ರಧಾನಿ ನರೇಂದ್ರ ಮೋದಿ ಕುರಿತು ಆನ್'ಲೈನ್ ಸಮೀಕ್ಷೆ ನಡೆಸಿದ್ದಾರೆ.
ನೋಟು ಅಮಾನ್ಯದ ಬಗ್ಗೆ ಈಗಾಗಲೇ ಸಾಕಷ್ಟು ಪರ-ವಿರೋದ ಚರ್ಚೆಗಳನ್ನು ಕೇಳುತ್ತಲೇ ಬಂದಿದ್ದೇವೆ. ಈ ಬಗ್ಗೆ ಖ್ಯಾತ ಲೇಖಕ ಚೇತನ್ ಭಗತ್ ಒಂದಷ್ಟು ಮಾಹಿತಿಗಳನ್ನು ಕಲೆಹಾಕುವ ಸಲುವಾಗಿ ಟ್ವಿಟ್ಟರ್'ನಲ್ಲಿ ಪ್ರಧಾನಿ ನರೇಂದ್ರ ಮೋದಿ ಕುರಿತು ಆನ್'ಲೈನ್ ಸಮೀಕ್ಷೆ ನಡೆಸಿದ್ದಾರೆ. ಅದರಿಂದ ಬಂದ ಉತ್ತರ ನಿಜಕ್ಕೂ ಆಘಾತಕಾರಿಯಾಗಿದೆ.
ಅದರ ಸಾರಾಂಶ ಇಂತಿದೆ:
ಒಂದುವೇಳೆ ನಿಮ್ಮ ನಾಯಕ ಮೋದಿ ಕಡಿಮೆ ಪ್ರಜಾಪ್ರಭುತ್ವದ ಅವಕಾಶವನ್ನು ಕೊಟ್ಟರೂ ಪರವಾಗಿಲ್ಲವೇ? ಎಂಬ ಪ್ರಶ್ನೆಗೆ ಟ್ವಿಟ್ಟರ್'ನಲ್ಲಿ ಸುಮಾರು 10 ಸಾವಿರಕ್ಕೂ ಹೆಚ್ಚು ಮಂದಿ ಪ್ರತಿಕ್ರಿಯಿಸಿದ್ದು ಶೇ.55% ಮಂದಿ ಮೋದಿಯೇ ನಮ್ಮ ನಾಯಕ ಎಂದಿದ್ದಾರೆ.
ಇನ್ನು, ಒಂದು ವೇಳೆ ಸಂಪೂರ್ಣ ಭ್ರಷ್ಟಾಚಾರ ತೊಡೆದು ಹಾಕುತ್ತೇನೆ, ಭ್ರಷ್ಟರನ್ನು ಶಿಕ್ಷಿಸುತ್ತೇನೆ ಹಾಗಾಗಿ ತುರ್ತು ಪರಿಸ್ಥಿತಿ ಘೋಷಿಸುತ್ತೇನೆ ಎಂದರೆ ಅದಕ್ಕೂ ನೀವು ಬೆಂಬಲಿಸುತ್ತೀರಾ? ಎಂಬ ಪ್ರಶ್ನೆಗೆ ಸುಮಾರು 9 ಸಾವಿರ ಮಂದಿ ಪ್ರತಿಕ್ರಿಯಿಸಿದ್ದು ಶೇ.57% ಜನ ಹೌದು ನಾವು ಬೆಂಬಲಿಸುತ್ತೇವೆ ಎಂದಿದ್ದಾರೆ.
ಚೇತನ್ ಭಗತ್ ಟ್ವಿಟರ್'ನಲ್ಲಿ ನಡೆಸಿರುವ ಸಮೀಕ್ಷೆ, ಅವರ ಅಂತಿಮವಾಗಿ ಅಭಿಪ್ರಾಯ ನಿಮಗಾಗಿ...
