ರಾಜ್ಯ ಕಾಂಗ್ರೆಸ್ ಉಸ್ತುವಾರಿಯಾಗಿದ್ದ ದಿಗ್ವಿಜಯಸಿಂಗ್ ಅಳಿಯನ ವಿರುದ್ಧ ಚೆಕ್ ಬೌನ್ಸ್ ಪ್ರಕರಣದ ಆರೋಪ ಕೇಳಿ ಬಂದಿದೆ. ದಿಗ್ವಿಜಯ್ ಸಿಂಗ್ ಅಳಿಯ ಭವಾನಿಸಿಂಗ್ ಬೆಂಗಳೂರಿನ ಬಾಲಾಜಿ ಎಲೆಕ್ಟ್ರಿಕಲ್ಸ್ 'ಗೆ ರಾಜ್ಯ ಸರ್ಕಾರದಿಂದ ಎಲೆಕ್ಟ್ರಿಕ್ ಗುತ್ತಿಗೆ ಕೊಡಿಸುವುದಾಗಿ ಹೇಳಿ 1.15 ಕೋಟಿ ಪಡೆದು ಟೋಪಿ ಹಾಕಿದ್ದಾರೆ. ಈ ಹಣವನ್ನ ದಿಗ್ವಿಜಯಸಿಂಗ್ ಸಮ್ನುಖದಲ್ಲೇ ನೀಡಿದ್ದಾಗಿ ಬಾಲಾಜಿ ಎಲೆಕ್ಟ್ರಿಕಲ್ಸ್ ಮಾಲೀಕರು ಆರೋಪಿಸಿದ್ದಾರೆ.
ಬೆಂಗಳೂರು(ಅ.18): ರಾಜ್ಯ ಕಾಂಗ್ರೆಸ್ ಉಸ್ತುವಾರಿಯಾಗಿದ್ದ ದಿಗ್ವಿಜಯಸಿಂಗ್ ಅಳಿಯನ ವಿರುದ್ಧ ಚೆಕ್ ಬೌನ್ಸ್ ಪ್ರಕರಣದ ಆರೋಪ ಕೇಳಿ ಬಂದಿದೆ. ದಿಗ್ವಿಜಯ್ ಸಿಂಗ್ ಅಳಿಯ ಭವಾನಿಸಿಂಗ್ ಬೆಂಗಳೂರಿನ ಬಾಲಾಜಿ ಎಲೆಕ್ಟ್ರಿಕಲ್ಸ್ 'ಗೆ ರಾಜ್ಯ ಸರ್ಕಾರದಿಂದ ಎಲೆಕ್ಟ್ರಿಕ್ ಗುತ್ತಿಗೆ ಕೊಡಿಸುವುದಾಗಿ ಹೇಳಿ 1.15 ಕೋಟಿ ಪಡೆದು ಟೋಪಿ ಹಾಕಿದ್ದಾರೆ. ಈ ಹಣವನ್ನ ದಿಗ್ವಿಜಯಸಿಂಗ್ ಸಮ್ನುಖದಲ್ಲೇ ನೀಡಿದ್ದಾಗಿ ಬಾಲಾಜಿ ಎಲೆಕ್ಟ್ರಿಕಲ್ಸ್ ಮಾಲೀಕರು ಆರೋಪಿಸಿದ್ದಾರೆ.
ಹಣ ಕೊಟ್ಟ ಕೆಲ ದಿನಗಳ ಬಳಿಕ ದಿಗ್ವಿಜಯಸಿಂಗ್ ಕಾಂಗ್ರೆಸ್ ಉಸ್ತುವಾರಿ ಹುದ್ದೆಯಿಂದ ತೆಗೆಯಲಾಯಿತು. ಬಳಿಕ ಭವಾನಿಸಿಂಗ್, ಬಾಲಾಜಿ ಎಲೆಕ್ಟ್ರಿಕಲ್ಸ್ ಗೆ ಹಣ ವಾಪಸ್ ಮಾಡಲೇ ಇಲ್ಲ. ಕೊನೆಗೆ ಒತ್ತಾಯದ ಮೇರೆಗೆ ಮೂರು ಚೆಕ್ ನ್ನು ಭವಾನಿಸಿಂಗ್ ನೀಡಿದ್ದು, ಈ ಚೆಕ್ ಗಳೆಲ್ಲವೂ ಬೌನ್ಸ್ ಆಗಿವೆ. ಪರಿಣಾಮ ಬಾಲಾಜಿ ಎಲೆಕ್ಟ್ರಿಕಲ್ಸ್ ಮಾಲಿಕ ವಕೀಲರ ಮೂಲಕ ಭಾವಾನಿ ಸಿಂಗ್ ಗೆ ನೊಟೀಸ್ ಜಾರಿಯಾಗಿದೆ.
ನೊಟೀಸ್ ಗೆ ಉತ್ತರ ಕೊಡದ ಹಿನ್ನಲೆಯಲ್ಲಿ ಚೆಕ್ ಬೌನ್ಸ್ ಪ್ರಕರಣ ದಾಖಲಾಗಿದ್ದು, 22ಎಸಿಎಂಎಂ ಕೋರ್ಟ್ ಭವಾನಿಸಿಂಗ್ ಗೆ ಸಮನ್ಸ್ ಜಾರಿ ಮಾಡಿದೆ. ಆದ್ರೆ ದಿಗ್ವಿಜಯಸಿಂಗ್ ಸಮ್ಮುಖದಲ್ಲೇ ಇದೆಲ್ಲವೂ ನಡೆದಿದ್ದರಿಂದ ಅವರೂ ಕೂಡ ಉತ್ತರ ನೀಡಲೇ ಬೇಕಿದೆ.
