ಮುಂಬೈ,ಬೆಂಗಳೂರು, ಚೆನ್ನೈ, ನವದೆಹಲಿ, ಕೋಲ್ಕತ್ತಾ, ಪಾಟ್ನ, ಅಹಮದಾಬಾದ್ ಸೇರಿದಂತೆ ಪ್ರಮುಖ ಪಟ್ಟಣಗಳ ಶಾಕಾ ಹೆಸರುಗಳು ಹಾಗೂ ಕೋಡ್'ಗಳನ್ನು ಎಸ್'ಬಿಐ ನೂತನ ವರ್ಷದಿಂದ ಬದಲಾಯಿಸಲಿದೆ.
ಮುಂಬೈ(ಡಿ.27): ಭಾರತೀಯ ಸ್ಟೇಟ್ ಬ್ಯಾಂಕ್'ನ ಅಧೀನದಲ್ಲಿರುವ ಈ ಬ್ಯಾಂಕುಗಳ ಚೆಕ್ ಬುಕ್'ಗಳು ಡಿ.31ರ ನಂತರ ಅಮಾನ್ಯವಾಗಲಿದ್ದು, ಖಾತದಾರರು ತಮ್ಮ ಶಾಖೆಗೆ ಹೋಗಿ ನೂತನ ಚೆಕ್ ಬುಕ್'ಗಳನ್ನು ಪಡೆದುಕೊಳ್ಳಬೇಕು.
ಐಎಫ್'ಎಸ್'ಸಿ ಕೋಡ್ ಬದಲಾಗುವ ಕಾರಣ ಸ್ಟೇಟ್ ಬ್ಯಾಂಕ್ ಆಫ್ ಮೈಸೂರ್, ಭಾರತೀಯ ಮಹಿಳಾ ಬ್ಯಾಂಕ್, ಸ್ಟೇಟ್ ಬ್ಯಾಂಕ್ ಆಫ್ ಪಾಟಿಯಾಲ, ಸ್ಟೇಟ್ ಬ್ಯಾಂಕ್ ಆಫ್ ಬಿಕನೇರ್ ಅಂಡ್ ಜೈಪುರ್, ಸ್ಟೇಟ್ ಬ್ಯಾಂಕ್ ಆಫ್ ರಾಯ್'ಪುರ್, ಸ್ಟೇಟ್ ಬ್ಯಾಂಕ್ ಆಫ್ ಟ್ರಿವಾಂಕೂರ್ ಹಾಗೂ ಸ್ಟೇಟ್ ಬ್ಯಾಂಕ್ ಆಫ್ ಹೈದರಾಬಾದ್'ನಲ್ಲಿ ಖಾತೆ ಹೊಂದಿರುವವರು ಹೊಸ ಚೆಕ್ ಬುಕ್'ಗಳನ್ನು ಪಡೆದುಕೊಳ್ಳಬೇಕು.
ಮುಂಬೈ,ಬೆಂಗಳೂರು, ಚೆನ್ನೈ, ನವದೆಹಲಿ, ಕೋಲ್ಕತ್ತಾ, ಪಾಟ್ನ, ಅಹಮದಾಬಾದ್ ಸೇರಿದಂತೆ ಪ್ರಮುಖ ಪಟ್ಟಣಗಳ ಶಾಕಾ ಹೆಸರುಗಳು ಹಾಗೂ ಕೋಡ್'ಗಳನ್ನು ಎಸ್'ಬಿಐ ನೂತನ ವರ್ಷದಿಂದ ಬದಲಾಯಿಸಿದೆ.
