ದೇವೇಗೌಡರ ಜೊತೆ 15 ದಿನಕ್ಕೊಮ್ಮೆ ಚೆನ್ನಮ್ಮ ದೆಹಲಿಗೆ

First Published 6, Mar 2018, 3:38 PM IST
Chennamma Visits Delhi 15 days
Highlights

ದೇವೇಗೌಡರು ದೆಹಲಿಗೆ ಬಂದಾಗಲೆಲ್ಲ ಚೆನ್ನಮ್ಮ ಅವರು ಕೂಡ  ದೆಹಲಿಗೆ ಬರಲು ಆರಂಭಿಸಿದ್ದಾರೆ. ವರ್ಷದ ಹಿಂದೆ ಚೆನ್ನಮ್ಮನವರು  ದೆಹಲಿಗೆ ಬಂದಾಗ ಸಾಫ್ದರ್ ಜಂಗ್ ರಸ್ತೆಯಲ್ಲಿರುವ ದೇವೇಗೌಡರ  ನಿವಾಸದಲ್ಲಿನ ಪೂಜಾ ಕೋಣೆ ನೋಡಿ ಬೇಸರಿಸಿಕೊಂಡಿದ್ದರಂತೆ.

ಬೆಂಗಳೂರು (ಮಾ.06): ದೇವೇಗೌಡರು ದೆಹಲಿಗೆ ಬಂದಾಗಲೆಲ್ಲ ಚೆನ್ನಮ್ಮ ಅವರು ಕೂಡ  ದೆಹಲಿಗೆ ಬರಲು ಆರಂಭಿಸಿದ್ದಾರೆ. ವರ್ಷದ ಹಿಂದೆ ಚೆನ್ನಮ್ಮನವರು  ದೆಹಲಿಗೆ ಬಂದಾಗ ಸಾಫ್ದರ್ ಜಂಗ್ ರಸ್ತೆಯಲ್ಲಿರುವ ದೇವೇಗೌಡರ  ನಿವಾಸದಲ್ಲಿನ ಪೂಜಾ ಕೋಣೆ ನೋಡಿ ಬೇಸರಿಸಿಕೊಂಡಿದ್ದರಂತೆ.

ದೆಹಲಿ ಮನೆಯಲ್ಲಿ ತಿಂಗಳಾನುಗಟ್ಟಲೆ ದೇವರನ್ನು ಪೂಜೆ ಮಾಡೋಲ್ಲ ಎಂದು ಚೆನ್ನಮ್ಮ ನವರು 15 ದಿನಕ್ಕೊಮ್ಮೆ ದೆಹಲಿಗೆ  ಬರುತ್ತಾರೆ. ಸುಮಾರು 4 ಗಂಟೆಗಳ ಕಾಲ ಕುಳಿತು ದೇವರನ್ನೆಲ್ಲ  ತೊಳೆದು ಸ್ವಚ್ಛಗೊಳಿಸಿ ಪೂಜೆ ಮಾಡುತ್ತಾರಂತೆ. ರವಿವಾರ  ಮೊಮ್ಮಗನ ಮದುವೆ ಮುಗಿಸಿ ದೆಹಲಿಗೆ ಬಂದಿದ್ದ ಚೆನ್ನಮನವರು  ಮಾಡುತ್ತಿದ್ದ ಪೂಜೆಯ ಬಗ್ಗೆ ಪತ್ರಕರ್ತರ ಬಳಿ ಹೇಳಿಕೊಂಡ  ಗೌಡರು, ‘ನೋಡಿ ಎಲ್ಲ ಅವಳ ಪೂಜೆಯ ಭಕ್ತಿಯ ಪುಣ್ಯ’ ಎಂದು  ಹೆಂಡತಿಯ ಬಗ್ಗೆ ಅಭಿಮಾನದಿಂದ ಮಾತನಾಡುತ್ತಿದ್ದರು. 

 

ರಾಜಕಾರಣದ ಬಗ್ಗೆ ಹೆಚ್ಚಿನ ಮಾಹಿತಿಗೆ ಇಂಡಿಯಾ ಗೇಟ್ ಕ್ಲಿಕ್ ಮಾಡಿ 

loader