ಚೆನ್ನೈ ಮಹಾನಗರ ಪಾಲಿಕೆಯಲ್ಲಿರುವ ನಾಲ್ಕು ಕೆರೆಗಳು ಸಂಪೂರ್ಣವಾಗಿ ಬತ್ತಿ ಹೋಗಿರುವ ಕಾರಣ ನಗರಕ್ಕೆ ಸರಿಯಾದ ನೀರಿನ ಪೂರೈಕೆಯಾಗುತ್ತಿಲ್ಲ.

ಚೆನ್ನೈ(ಜೂ.27): ಕಾವೇರಿ ನೀರಿಗಾಗಿ ಸುಪ್ರೀಂಕೋರ್ಟ್‌ ಮೆಟ್ಟಿಲೇರಿದ್ದ ತಮಿಳುನಾಡಿನ ಜನರಿಗೆ ಈಗ ಕುಡಿಯಲು ನೀರಿಲ್ಲ. ಕಳೆದ 140 ವರ್ಷಗಳಲ್ಲೇ ಮೊದಲ ಬಾರಿಗೆ ಘೋರ ಜಲ ಕ್ಷಾಮಕ್ಕೆ ಗುರಿಯಾಗಿದ್ದು, ಕೆಲ ತಿಂಗಳಿಂದ ಜನರು ಕುಡಿಯುವ ನೀರಿನ ತೀವ್ರ ಸಮಸ್ಯೆ ಎದುರಿಸುತ್ತಿದ್ದಾರೆ.

ಚೆನ್ನೈ ಮಹಾನಗರ ಪಾಲಿಕೆಯಲ್ಲಿರುವ ನಾಲ್ಕು ಕೆರೆಗಳು ಸಂಪೂರ್ಣವಾಗಿ ಬತ್ತಿ ಹೋಗಿರುವ ಕಾರಣ ನಗರಕ್ಕೆ ಸರಿಯಾದ ನೀರಿನ ಪೂರೈಕೆಯಾಗುತ್ತಿಲ್ಲ. ನಗರಕ್ಕೆ ಪೂರೈಕೆಯಾಗುತ್ತಿದ್ದ ನೀರಿನ ಪ್ರಮಾಣದಲ್ಲಿ ಶೇ. 50ರಷ್ಟು ಕಡಿತ ಮಾಡಲಾಗಿದೆ. ಕಳೆದ ಕೆಲ ವರ್ಷಗಳಿಂದ ನಗರಕ್ಕೆ ಪೈಪ್‌ಲೈನ್‌ ಮೂಲಕ ನೀರು ಪೂರೈಕೆಯಾಗುತ್ತಿದ್ದ ನೈವೇಲಿಯ ವೀರನಂ ಕೆರೆ ಸಹ ಸಂಪೂರ್ಣವಾಗಿ ಬತ್ತಿದೆ. ಚೆನ್ನೈಗೆ ಪ್ರತಿದಿನ 83 ಕೋಟಿ ಲೀಟರ್‌ ಕುಡಿಯುವ ನೀರಿನ ಅಗತ್ಯವಿದೆ. ಆದರೆ ಸದ್ಯ ಇದರ ಅರ್ಧದಷ್ಟು ಮಾತ್ರ ನೀರು ಪೂರೈಕೆಯಾಗುತ್ತಿದ್ದು, ಇದಕ್ಕಾಗಿ 300 ವಾಟರ್‌ ಟ್ಯಾಂಕರ್‌ ಬಳಕೆ ಮಾಡಲಾಗುತ್ತಿದೆ. ತಿರುವಳ್ಳುವರ್‌ ಹಾಗೂ ಕಾಂಚೀಪುರಂನ ಕಲ್ಲು ಕ್ವಾರಿಗಳಿಂದಲೂ ನೀರನ್ನು ತೆಗೆದು ತರಲಾಗುತ್ತಿದ್ದು, ಚೆನ್ನೈ ಸುತ್ತಮುತ್ತಲಿನ ಕೆರೆಗಳಿಂದ ಅಂತರ್ಜಲವನ್ನು ಪುನರ್ಭರ್ತಿ ಮಾಡುವ ಕೆಲಸ ನಡೆಯುತ್ತಿದೆ. 

(ಸಾಂದರ್ಭಿಕ ಚಿತ್ರ)