ಮುಟ್ಟಿನ ದಿನಗಳಲ್ಲಿ ಮಹಿಳೆಯರು ಬಳಸುವ ಸ್ಯಾನಿಟರಿ ನ್ಯಾಪಕಿನ್‌ ಕುರಿತು ಅರಿವು ಮೂಡಿಸುವ ‘ಪ್ಯಾಡ್‌ಮ್ಯಾನ್‌’ ಚಿತ್ರ ಬಿಡುಗಡೆಯಾದ ಬೆನ್ನಲ್ಲೇ, ತಮಿಳುನಾಡಿನ ಪ್ರಖ್ಯಾತ ಸತ್ಯಂ ಸಿನಿಮಾಸ್‌ ತನ್ನ ಎಲ್ಲಾ ಚಿತ್ರಮಂದಿರಗಳಲ್ಲಿ ಉಚಿತ ನ್ಯಾಪ್’ಕಿನ್‌ ವಿತರಿಸಲು ನಿರ್ಧರಿಸಿದೆ.

ಚೆನ್ನೈ: ಮುಟ್ಟಿನ ದಿನಗಳಲ್ಲಿ ಮಹಿಳೆಯರು ಬಳಸುವ ಸ್ಯಾನಿಟರಿ ನ್ಯಾಪಕಿನ್‌ ಕುರಿತು ಅರಿವು ಮೂಡಿಸುವ ‘ಪ್ಯಾಡ್‌ಮ್ಯಾನ್‌’ ಚಿತ್ರ ಬಿಡುಗಡೆಯಾದ ಬೆನ್ನಲ್ಲೇ, ತಮಿಳುನಾಡಿನ ಪ್ರಖ್ಯಾತ ಸತ್ಯಂ ಸಿನಿಮಾಸ್‌ ತನ್ನ ಎಲ್ಲಾ ಚಿತ್ರಮಂದಿರಗಳಲ್ಲಿ ಉಚಿತ ನ್ಯಾಪ್’ಕಿನ್‌ ವಿತರಿಸಲು ನಿರ್ಧರಿಸಿದೆ.

 ಮೊದಲ ಹಂತದಲ್ಲಿನ ಚೆನ್ನೈನಲ್ಲಿನ ಚಿತ್ರಮಂದಿರದಲ್ಲಿ ಉಚಿತವಾಗಿ ನ್ಯಾಪ್’ಕಿನ್‌ ವಿತರಿಸುವ ಯಂತ್ರ ಅಳವಡಿಸಲಾಗುವುದು. ಶೀಘ್ರವೇ ಇದನ್ನು ಬೆಂಗಳೂರು ಸೇರಿದಂತೆ ಇತರೆ ನಗರಗಳಲ್ಲಿ ನಮ್ಮ ಥಿಯೇಟರ್‌ಗಳಿಗೂ ವಿಸ್ತರಿಸಲಾಗುವುದು ಎಂದು ಸಂಸ್ಥೆ ಹೇಳಿದೆ. ತಮಿಳುನಾಡಿನ ಅರುಣಾಚಲಂ ಮುರುಗನಾಥನ್‌ ಅವರ ಜೀವನ ಕಥೆಯನ್ನು ಆಧರಿಸಿ ಪ್ಯಾಡ್‌ಮ್ಯಾನ್‌ ಚಿತ್ರ ನಿರ್ಮಿಸಲಾಗಿದೆ.