ಕೇಂದ್ರ ಸಚಿವರೂ ಸೇರಿ 28 ಸಂಸದರನ್ನೂ ಕರೆದುಕೊಂಡು ದೇವೇಗೌಡರು ಪ್ರಧಾನಿಯವರನ್ನ ಭೇಟಿ ಮಾಡಬೇಕಿತ್ತು

ಮಂಡ್ಯ(ಸೆ.21): ಕಾವೇರಿ ನದಿ ನೀರು ವಿಚಾರದಲ್ಲಿ ರಾಜ್ಯಕ್ಕಾಗುತ್ತಿರುವ ಅನ್ಯಾಯ ಕುರಿತಂತೆ ಪ್ರಧಾನಮಂತ್ರಿಗಳ ಗಮನ ಸೆಳೆಯಲು ಜೆಡಿಎಸ್ ವರಿಷ್ಠ ದೇವೇಗೌಡರು ಇತ್ತೀಚೆಗೆ ಪ್ರಧಾನಿ ನರೇಂದ್ರ ಮಾಡಿದ್ದರು. ಈ ಕುರಿತು, ಪ್ರತಿಕ್ರಿಯಿಸಿರುವ ಶಾಸಕ ಚೆಲುವರಾಯಸ್ವಾಮಿ ದೇವೇಗೌಡರು ಒಬ್ರೇ ಹೋಗಿದ್ದು ತಪ್ಪು ಎಂದಿದ್ದಾರೆ.

ಕೇಂದ್ರ ಸಚಿವರೂ ಸೇರಿ 28 ಸಂಸದರನ್ನೂ ಕರೆದುಕೊಂಡು ದೇವೇಗೌಡರು ಪ್ರಧಾನಿಯವರನ್ನ ಭೇಟಿ ಮಾಡಬೇಕಿತ್ತು. ಆಗ ಭೇಟಿಯಿಂದ ಪ್ರಯೋಜನವಾಗುತ್ತಿತ್ತು ಎಂದು ಶಾಸಕ ಚೆಲುವರಾಯಸ್ವಾಮಿ ಹೇಳಿದ್ದಾರೆ.