ರಾಮನಗರ ಜಿಲ್ಲೆಯ ಮಾಗಡಿ ತಾಲೂಕಿನ ಗುಡ್ಡಹಳ್ಳಿಯಲ್ಲಿ ಈ ಘಟನೆ ನಡೆದಿದೆ. ರಾತ್ರಿ ಸುಮಾರು 2.30ರ ಹೊತ್ತಿಗೆ ಈ ಘಟನೆ ನಡೆದಿದೆ. ಗುಡ್ಡಹಳ್ಳಿಯ ರೈತ ಗಂಗಣ್ಣ ಎಂಬುವರ ನಾಯಿಗಳು ಚಿರತೆ ಬಂದಿದ್ದನ್ನು ನೋಡಿ ಬೊಗಳಲು ಶುರು ಮಾಡಿವೆ. ಈ ವೇಳೆ ಚಿರತೆ ನಾಯಿಯನ್ನು ಅಟ್ಟಿಸಿಕೊಂಡು ಹೋಗಿದ್ದು ಚಿರತೆಯಿಂದ ಪಾರಾಗಲು ನಾಯಿ ಸೀದಾ ಬಚ್ಚಲು ಮನೆಗೆ ಓಡಿದೆ.

ರಾಮನಗರ(ಜ.17): ಕಾಡಿನಿಂದ ನಾಡಿಗೆ ಬಂದ ಚಿರತೆಯೊಂದು ಸಾಕು ನಾಯಿ ತಿನ್ನಲು ಹೋಗಿ ಬಾತ್ ರೂಂಗೆ ಬಿದ್ದು, ಸೆರೆ ಸಿಕ್ಕಿದೆ.

ರಾಮನಗರ ಜಿಲ್ಲೆಯ ಮಾಗಡಿ ತಾಲೂಕಿನ ಗುಡ್ಡಹಳ್ಳಿಯಲ್ಲಿ ಈ ಘಟನೆ ನಡೆದಿದೆ. ರಾತ್ರಿ ಸುಮಾರು 2.30ರ ಹೊತ್ತಿಗೆ ಈ ಘಟನೆ ನಡೆದಿದೆ. ಗುಡ್ಡಹಳ್ಳಿಯ ರೈತ ಗಂಗಣ್ಣ ಎಂಬುವರ ನಾಯಿಗಳು ಚಿರತೆ ಬಂದಿದ್ದನ್ನು ನೋಡಿ ಬೊಗಳಲು ಶುರು ಮಾಡಿವೆ. ಈ ವೇಳೆ ಚಿರತೆ ನಾಯಿಯನ್ನು ಅಟ್ಟಿಸಿಕೊಂಡು ಹೋಗಿದ್ದು ಚಿರತೆಯಿಂದ ಪಾರಾಗಲು ನಾಯಿ ಸೀದಾ ಬಚ್ಚಲು ಮನೆಗೆ ಓಡಿದೆ.

ಈ ದೃಶ್ಯ ಕಂಡ ರೈತ ಗಂಗಣ್ಣ ಹೊರಗಿನಿಂದ ಬಚ್ಚಲುಮನೆಯ ಬಾಗಿಲು ಹಾಕಿದ್ದಾರೆ. ಹೀಗಾಗಿ ಚಿರತೆ ಸೆರೆಯಾಗಿದೆ. ಬಳಿಕ ರೈತ ಅರಣ್ಯಾಧಿಕಾರಿಗಳಿಗೆ ವಿಷಯ ತಿಳಿಸಿದ್ದು, ಸ್ಥಳಕ್ಕೆ ಅರಣ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.