ನಟಿ ಹೆಸರಲ್ಲಿ ನಕಲಿ ಬ್ಯಾಂಕ್ ಖಾತೆ ತೆರೆದು ವಂಚನೆ

First Published 6, Apr 2018, 10:29 AM IST
Cheating to Actress
Highlights

ನಕಲಿ ಖಾತೆ ತೆರೆದು ನಟಿಯೊಬ್ಬರಿಗೆ  ವಂಚಿಸಲಾಗಿದೆ.  ನಟಿ ಅಶ್ವಿನಿ ಗೌಡ ವಂಚನೆಗೊಳಗಾದ ನಟಿ.  

 

ಬೆಂಗಳೂರು (ಏ. 06): ನಕಲಿ ಖಾತೆ ತೆರೆದು ನಟಿಯೊಬ್ಬರಿಗೆ  ವಂಚಿಸಲಾಗಿದೆ.  ನಟಿ ಅಶ್ವಿನಿ ಗೌಡ ವಂಚನೆಗೊಳಗಾದ ನಟಿ.  

ಮಹಾಲಕ್ಷ್ಮಿ ಲೇಔಟ್ ನಲ್ಲಿರುವ ಜನತಾ ಸೇವಾ ಕೋ ಅಪರೇಟಿವ್ ಬ್ಯಾಂಕಿನಲ್ಲಿ  ಅಶ್ವಿನಿ ಗೌಡ ಹೆಸರಲ್ಲಿ  ಖಾತೆ ತೆರೆದು 5 ‌ಲಕ್ಷ ರೂಪಾಯಿ ಚೆಕ್ ಬೌನ್ಸ್ ಮಾಡಲಾಗಿದೆ.  2016 ರಲ್ಲಿ  ಅಶ್ವಿನಿ ಹೆಸರಲ್ಲಿ ನಕಲಿ ಖಾತೆ ತೆರೆಯಾಲಾಗಿತ್ತು. ಎರಡು ವರ್ಷದಲ್ಲಿ ಸುಮಾರು 60 ಲಕ್ಷ ಖಾತೆಯಲ್ಲಿ ವಹಿವಾಟು ನಡೆದಿತ್ತು.  ಇದೆ ಸಮಯದಲ್ಲಿ ಅಶ್ವಿನಿ ಗೌಡ ಹೆಸರಲ್ಲಿ ಕೆಲವೊಂದು ಚೆಕ್ ಬೌನ್ಸ್ ಆಗಿತ್ತು.  ಆಗ ಅಶ್ವಿನಿ  ಗೌಡ ಬ್ಯಾಂಕಿನ ವ್ಯವಸ್ಥಾಪಕ  ರಾಮು, ನಿರ್ದೇಶಕರಾದ ಭಾಗ್ಯ, ಜೈರಾಮ್. ವೆಂಕಟೇಶ್. ಚೇತನ್. ವಿರುದ್ದ ಮಹಾಲಕ್ಷ್ಮಿ ಲೇಔಟ್ ಗೆ ದೂರು ನೀಡಿದ್ದರು.  

ಇದೆ ವಿಷಯಯಕ್ಕೆ ಸಂಬಂಧಿಸಿದಂತೆ ಹಲಸೂರ್ ಗೇಟ್ ಪೊಲೀಸ್ ಠಾಣೆಯಲ್ಲಿ ಮತ್ತೊಂದು ಪ್ರಕರಣ ದಾಖಲಾಗಿದೆ. 

loader