Asianet Suvarna News Asianet Suvarna News

ಫ್ಲಿಪ್ ಕಾರ್ಟ್ ಸ್ಥಾಪಕರ ಮೇಲೆ 10 ಕೋಟಿ ರು. ವಂಚನೆ ಕೇಸ್

ಫ್ಲಿಪ್‌ಕಾರ್ಟ್ ಸಂಸ್ಥಾಪಕ ಸಚಿನ್ ಬನ್ಸಾಲ್, ಬಿನ್ನಿ ಬನ್ಸಾಲ್, ಮಾರುಕಟ್ಟೆ ನಿರ್ದೇಶಕ ಹರಿ, ಅಕೌಂಟೆಂಟ್‌ಗಳಾದ ಸುಮಿತ್ ಆನಂದ್, ಸಾರಾಕ್ಯೂ ಮತ್ತು ಸಿಬ್ಬಂದಿ ವಿರುದ್ಧ ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

Cheating Case Against Flipkart

ಬೆಂಗಳೂರು(ನ.27):  9.9 ಕೋಟಿ ವಂಚನೆ ಆರೋಪದಡಿ ಫ್ಲಿಪ್‌ಕಾರ್ಟ್ ಸಂಸ್ಥಾಪಕ ಸೇರಿ ಆರು ಮಂದಿ ವಿರುದ್ಧ ಇಂದಿರಾನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಇಂದಿರಾನಗರದ ಸಿ-ಸ್ಟೋರ್ ಕಂಪನಿ ಅಧಿಕಾರಿ ನವೀನ್‌ಕುಮಾರ್ ಎಂಬುವರು ಫ್ಲಿಫ್ ಕಾರ್ಟ್ ವಿರುದ್ಧ ದೂರು ಕೊಟ್ಟಿದ್ದಾರೆ. ಈ ಮೇರೆಗೆ ಫ್ಲಿಪ್‌ಕಾರ್ಟ್ ಸಂಸ್ಥಾಪಕ ಸಚಿನ್ ಬನ್ಸಾಲ್, ಬಿನ್ನಿ ಬನ್ಸಾಲ್, ಮಾರುಕಟ್ಟೆ ನಿರ್ದೇಶಕ ಹರಿ, ಅಕೌಂಟೆಂಟ್‌ಗಳಾದ ಸುಮಿತ್ ಆನಂದ್, ಸಾರಾಕ್ಯೂ ಮತ್ತು ಸಿಬ್ಬಂದಿ ವಿರುದ್ಧ ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಫ್ಲಿಪ್‌ಕಾರ್ಟ್ ಕಂಪನಿಗೆ ಲ್ಯಾಪ್‌ಟಾಪ್ ಇತ್ಯಾದಿ ಎಲೆಕ್ಟ್ರಾನಿಕ್ ವಸ್ತುಗಳನ್ನು ಸರಬರಾಜು ಮಾಡಲು ಸಿ-ಸ್ಟೋರ್ ಕಂಪನಿ ಒಪ್ಪಂದ ಮಾಡಿಕೊಂಡಿದೆ. ಜೂನ್ 2015ರಿಂದ 2016  ಜೂನ್ ನಡುವೆ ‘ಬಿಗ್ ಬಿಲಿಯನ್ ಡೇ ಸೇಲ್’ ಎಂಬ ಹೆಸರಿನಲ್ಲಿ ಫ್ಲಿಪ್‌ಕಾರ್ಟ್‌ಗೆ 14 ಸಾವಿರ ಲ್ಯಾಪ್‌ಟಾಪ್ ಪೂರೈಕೆ ಮಾಡಲಾಗಿದೆ.

ಈ ಪೈಕಿ 1482 ಲ್ಯಾಪ್‌ಟಾಪ್ ವಾಪಸ್ ಕೊಟ್ಟಿದ್ದಾರೆ. ಬಾಕಿ ಸರಕಿಗೆ ಹಣ ಪಾವತಿ ಮಾಡಿಲ್ಲ. ಸಾಗಣೆ ಶುಲ್ಕ ಸಹ ಕೊಟ್ಟಿಲ್ಲ. ಕಂಪನಿ ಅಧಿಕಾರಿಗಳನ್ನು ವಿಚಾರಿಸಿದಾಗ 3901 ಲ್ಯಾಪ್ ಟಾಪ್ ವಾಪಸ್ ಕೊಟ್ಟಿರುವುದಾಗಿ ಸುಳ್ಳು ಲೆಕ್ಕಾ ನೀಡಿದ್ದಾರೆ. ಇದೇ ರೀತಿ ಫ್ಲಿಪ್‌ಕಾರ್ಟ್ ಒಟ್ಟು 9.92 ಕೋಟಿ ಹಣ ನೀಡದೆ ವಂಚಿಸಿದೆ ನವೀನ್ ಕುಮಾರ್ ದೂರಿನಲ್ಲಿ ಉಲ್ಲೇಖಿಸಿದ್ದಾರೆ ಎಂದು ಪೊಲೀಸರು ಹೇಳಿದರು.

Follow Us:
Download App:
  • android
  • ios