ನಟ ಸುದೀಪ್ ವಿರುದ್ಧ ಗಂಭೀರ ವಂಚನೆ ಆರೋಪ

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 1, Aug 2018, 10:04 AM IST
Cheating allegation on kiccha Sudeep
Highlights

ಸ್ಯಾಂಡಲ್ ವುಡ್ ನಟ ಸುದೀಪ್ ವಿರುದ್ಧ ಗಂಭೀರ ವಂಚನೆ ಆರೋಪ ಕೇಳಿ ಬಂದಿದೆ. 

'ವಾರಸ್ದಾರ' ಧಾರವಾಹಿ ಚಿತ್ರೀಕರಣಕ್ಕೆ ಮನೆ, ಜಮೀನು ಬಳಕೆ ಮಾಡಿಕೊಂಡು  ಬಾಡಿಗೆ ನೀಡದೇ ಸುದೀಪ್ ಲಕ್ಷಾಂತರ ರೂಪಾಯಿ ವಂಚನೆ ಮಾಡಿದ್ದಾರೆಂದು  ಮಾಲೀಕ ದೀಪಕ್ ಮಯೂರ್ ಪಟೇಲ್ ಫಿಲಂ ಚೇಂಬರ್ ಮೊರೆ ಹೋಗಿದ್ದಾರೆ. 

ಬೆಂಗಳೂರು (ಆ. 01): ಸ್ಯಾಂಡಲ್ ವುಡ್ ನಟ ಸುದೀಪ್ ವಿರುದ್ಧ ಗಂಭೀರ ವಂಚನೆ ಆರೋಪ ಕೇಳಿ ಬಂದಿದೆ. 

'ವಾರಸ್ದಾರ' ಧಾರವಾಹಿ ಚಿತ್ರೀಕರಣಕ್ಕೆ ಮನೆ, ಜಮೀನು ಬಳಕೆ ಮಾಡಿಕೊಂಡು  ಬಾಡಿಗೆ ನೀಡದೇ ಸುದೀಪ್ ಲಕ್ಷಾಂತರ ರೂಪಾಯಿ ವಂಚನೆ ಮಾಡಿದ್ದಾರೆಂದು  ಮಾಲೀಕ ದೀಪಕ್ ಮಯೂರ್ ಪಟೇಲ್ ಫಿಲಂ ಚೇಂಬರ್ ಮೊರೆ ಹೋಗಿದ್ದಾರೆ. 

ಚಿಕ್ಕಮಗಳೂರಿನ ಕಾಫಿ ಎಸ್ಟೆಟ್ ಬಾಡಿಗೆ ಪಡೆದಿದ್ದ ಸುದೀಪ್ ಬಗೆ ಬಗೆಯ ಗಿಡ ಕಡಿದು ಗೆಸ್ಟ್ ಹೌಸ್ ನಿರ್ಮಾಣ ಮಾಡಿದ್ದರು.  ಅರ್ಧದಲ್ಲೇ ಶೂಟಿಂಗ್  ಪ್ಯಾಕಪ್ ಮಾಡಿತ್ತು ವಾರಸ್ದಾರ ತಂಡ. 

ಚಿತ್ರತಂಡದಿಂದ ಮಾಲೀಕರಿಗೆ ಸುಮಾರು  90 ಲಕ್ಷ ಮೌಲ್ಯದ ನಷ್ಟವಾಗಿದೆ ಎಂದು ಹೇಳಲಾಗಿದೆ.  ಹಣಕ್ಕಾಗಿ ಪ್ರತಿದಿನವೂ ಮಾಲೀಕ ದೀಪಕ್ ಮಯೂರ್ ಅಲೆಯುತ್ತಿದ್ದಾರೆ.  ಚಿಕ್ಕಮಗಳೂರು ಎಸ್ಪಿಗೆ ದೂರು ನೀಡಿದರೂ ಪ್ರಯೋಜನವಾಗಿಲ್ಲ ಎಂದು ದೀಪಕ್ ಆರೋಪಿಸಿದ್ದಾರೆ. 

loader