ಬೆಂಗಳೂರು(ಸೆ.20): ತನ್ನ ಸೌಂದರ್ಯವನ್ನು ಬಳಸಿಕೊಂಡು ಹಣ ಮಾಡೊದಕ್ಕೆ ಇಳಿದ ಮಹಿಳೆ ಒಂದಲ್ಲಾ ಎರಡಲ್ಲಾ ಬರೊಬ್ಬರಿ ಏಳು ಪುರುಷರನ್ನ ವರಿಸಿ ಕೈಗೆ ಚಂಬನ್ನಿಟ್ಟು ಪರಾರಿಯಾಗಿದ್ದಳು, ಕೊನೆಗೆ ಆಕೆಯನ್ನು ಪತ್ತೆ ಹಚ್ಚಿ ಬಂಧಿಸುವಲ್ಲಿ ಕೆ.ಜಿ.ಹಳ್ಳಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಬೆಂಗಳೂರಿನಲ್ಲಿ ಸಾರಾಯಿಪಾಳ್ಯದ ಯಾಸ್ಮಿನ್ ಬಾನು 9 ವರ್ಷದ ಹಿಂದೆ ಪ್ರೀತಿಸಿ ಇಮ್ರಾನ್ ಮದುವೆಯಾಗಿದ್ದಾಳೆ. ಎರಡು ಮಕ್ಕಳಾದ ನಂತರ ಆತನಿಗೆ ವಿಚ್ಛೇದನ ನೀಡಿ ಹತ್ತು ಲಕ್ಷ ಹಣ ಪಡೆದುಕೊಂಡಿದ್ದಾಳೆ. ನಂತರ ಜೈದ್ ಸೇಟ್, ಸಿರಾಜ್, ಅಫ್ಜಲ್, ಆಸೀಫ್ ಹೀಗೆ ಏಳು ಮಂದಿ ಮದುವೆಯಾಗಿ ವಂಚಿಸಿದ್ದಾಳೆ.
ಈಕೆಯ ಬಂಡವಾಳ ತಿಳಿದ ಮೊದಲ ಪತಿ ನಿನ್ನೆ ಪೊಲೀಸರಿಗೆ ದೂರು ನೀಡಲು ಮುಂದಾದಾಗ ಆತನ ಮೇಲೆ ಹುಡುಗರಿಂದ ಹಲ್ಲೆ ನಡೆಸಿದ್ದಾಳೆ. ತಲೆ ಮರೆಸಿಕೊಂಡಿದ್ದ ಈಕೆಯ ಮೇಲೆ ಕೆಜಿಹಳ್ಳಿ ಪೊಲೀಸರು ದೂರು ದಾಖಲಿಸಿಕೊಂಡು ಶೋಧ ನಡೆಸಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಮೊದಲ ಪತಿ ಇಮ್ರಾನ್ ದೂರು ನೀಡಿದ್ದರು ಹಿನ್ನಲೆಯಲ್ಲಿ ಯಾಸ್ಮಿನ್ ಬಾನು ಬಂಧಸಿದ ಕೆ.ಜಿ.ಹಳ್ಳಿ ಪೊಲೀಸರಿಂದ ಐಪಿಸಿ 324, 341ರ ಅನುಚಿತ ವರ್ತನೆ ಪ್ರಕರಣ ದಾಖಲಿಸಲಾಗಿದೆ. ನಂತರ ಸ್ಟೇಷನ್ ಜಾಮೀನಿನ ಮೇಲೆ ಯಾಸ್ಮಿನ್ ಬಾನು ಬಿಡುಗಡೆ ಮಾಡಿದ್ದಾರೆ.
