ಶಾಸಕರ ಹಲವು ರಾಜಕೀಯ ಸಮಾವೇಶಗಳನ್ನು ಆಯೋಜನೆ ಮಾಡುತ್ತೇನೆ. ಕಾರ್ಯಕ್ರಮಕ್ಕೆ 10 ಸಾವಿರ ಕೊಟ್ಟರೆ, ಮರುದಿನ 20 ಸಾವಿರ ಕೊಡುತ್ತಾರೆ ಎಂದು ನಂಬಿಸುತ್ತಿದ್ದರು.
ಬೆಂಗಳೂರು(ಆ.12): ಚಾಮರಾಜಪೇಟೆ ಕ್ಷೇತ್ರದ ಶಾಸಕ ಜಮೀರ್ ಅಹಮದ್ ಹೆಸರಿನಲ್ಲಿ ಮಹಿಳೆಯೊಬ್ಬರು ಹಣ ಪಡೆದು ವಂಚಿಸಿದ್ದಾರೆ ಎಂದು ಆರೋಪಿಸಿ ಮಹಿಳೆಯೊಬ್ಬರು ಸುದ್ದುಗುಂಟೆಪಾಳ್ಯ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಬಿಟಿಎಂ ಲೇಔಟ್ ನಿವಾಸಿಸಮ್ರಿನ್(೨೬) ಎಂಬ ಮಹಿಳೆ ವಿರುದ್ಧ ದೂರು ದಾಖಲಾಗಿದೆ.
ನನಗೆ ಶಾಸಕ ಜಮೀರ್ ಅಹಮದ್ ಅವರ ಪರಿಚಯವಿದೆ. ಐಷಾರಾಮಿ ಹೋಟೆಲ್‌ಗಳಲ್ಲಿ
ಶಾಸಕರ ಹಲವು ರಾಜಕೀಯ ಸಮಾವೇಶಗಳನ್ನು ಆಯೋಜನೆ ಮಾಡುತ್ತೇನೆ. ಕಾರ್ಯಕ್ರಮಕ್ಕೆ 10 ಸಾವಿರ ಕೊಟ್ಟರೆ, ಮರುದಿನ 20 ಸಾವಿರ ಕೊಡುತ್ತಾರೆ ಎಂದು ನಂಬಿಸುತ್ತಿದ್ದರು. ರಾಜಕೀಯದ ಬಗ್ಗೆ ಹೆಚ್ಚಾಗಿ ತಿಳಿದುಕೊಳ್ಳದ ಮಹಿಳೆಯರು ತಾವು ಕೂಡಿಟ್ಟ ಹಣವನ್ನು ಮಹಿಳೆ ನೀಡುತ್ತಿದ್ದರು. ಹೀಗೆ ಹಲವು ಮಂದಿ ಹಣ ಪಡೆದು ವಂಚಿಸಿದ್ದಾರೆ ಎಂದು ತಬಸ್ಸಮ್ ಎಂಬುವರು ದೂರು ನೀಡಿದ್ದಾರೆ ಎನ್ನಲಾಗಿದೆ.
