Asianet Suvarna News Asianet Suvarna News

ಕಮ್ಮನಹಳ್ಳಿಯಲ್ಲಿ ಲೈಂಗಿಕ ದೌರ್ಜನ್ಯ ಪ್ರಕರಣ: 164 ಪುಟಗಳ ಸುದೀರ್ಘ ಚಾರ್ಜ್ ಶೀಟ್ ಸಲ್ಲಿಕೆ

ಹೊಸ ವರ್ಷದ ಮಧ್ಯರಾತ್ರಿ ಕಮ್ಮನಹಳ್ಳಿಯಲ್ಲಿ ನಡೆದಿದ್ದ ಲೈಂಗಿಕ ದೌರ್ಜನ್ಯ ಪ್ರಕರಣ ಸಂಬಂಧ ಚಾರ್ಜ್​ಶೀಟ್ ಸಲ್ಲಿಕೆಯಾಗಿದೆ. 11 ನೇ ಎಸಿಎಂಎಂ ನ್ಯಾಯಲಯದಲ್ಲಿ 164 ಪುಟಗಳ ಸುದೀರ್ಘ ಚಾರ್ಜ್​ ಶೀಟ್​ ಸಲ್ಲಿಕೆಯಾಗಿದೆ.

Charge Sheet Of Kammanahalli Sexual Harrasment Case Is Submitted To The Court

ಬೆಂಗಳೂರು(ಮಾ.07): ಹೊಸ ವರ್ಷದ ಮಧ್ಯರಾತ್ರಿ ಕಮ್ಮನಹಳ್ಳಿಯಲ್ಲಿ ನಡೆದಿದ್ದ ಲೈಂಗಿಕ ದೌರ್ಜನ್ಯ ಪ್ರಕರಣ ಸಂಬಂಧ ಚಾರ್ಜ್​ಶೀಟ್ ಸಲ್ಲಿಕೆಯಾಗಿದೆ. 11 ನೇ ಎಸಿಎಂಎಂ ನ್ಯಾಯಲಯದಲ್ಲಿ 164 ಪುಟಗಳ ಸುದೀರ್ಘ ಚಾರ್ಜ್​ ಶೀಟ್​ ಸಲ್ಲಿಕೆಯಾಗಿದೆ.

ಈ ಆರೋಪ ಪಟ್ಟಿಯಲ್ಲಿ 32 ಸಾಕ್ಷಿಗಳ ಹೇಳಿಕೆ ಉಲ್ಲೇಖವಾಗಿದ್ದು, ಪ್ರಶಾಂತ್​​ ಪ್ರಾನ್ಸಿಸ್​, ಹಾಗೂ ಸಿಸಿಟಿವಿ ದೃಶ್ಯ ಈ ಪ್ರಕರಣದ ಪ್ರಮುಖ ಸಾಕ್ಷಿಗಳಾಗಿವೆ. ಜೊತೆಗೆ ಚಾರ್ಜ್​ಶೀಟ್​ನಲ್ಲಿ ಆರೋಪಿ ತಪ್ಪೊಪ್ಪಿಗೆ ಕೂಡ ಉಲ್ಲೇಖವಾಗಿದ್ದು, ಸಂತ್ರಸ್ತ ಯುವತಿ ಆರೋಪಿಗಳನ್ನು ಗುರುತಿಸಿದ ವರದಿ, ಮ್ಯಾಜಿಸ್ಟರೇಟ್​ ಮುಂದೆ ಆಕೆ ನೀಡಿದ್ದ ಹೇಳಿಕೆಯೂ ಚಾರ್ಜ್​ಶೀಟ್ ನಲ್ಲಿ ದಾಖಲಾಗಿದೆ.

ಕೆಆರ್​ ಪುರಂ ವಿಭಾಗ ಎಸಿಪಿ ರವಿಕುಮಾರ್​ ನೇತೃತ್ವದಲ್ಲಿ ತನಿಖೆ ನಡೆದಿದ್ದು, ಆರೋಪಿಗಳಾದ ಅಯ್ಯಪ್ಪ, ಲಿನೋ, ರಾಜು, ಚಿನ್ನು ಹಾಗು ಪಪ್ಪಿ ವಿರುದ್ಧ ಚಾರ್ಜ್​ಶೀಟ್ ಸಲ್ಲಿಕೆಯಾಗಿದೆ.

Follow Us:
Download App:
  • android
  • ios