ಹಾಲಿವುಡ್‌ನ ಗ್ರಾವಿಟಿ ಚಿತ್ರದ ಬಜೆಟ್(644ಕೋಟಿ ರು.)ಗಿಂತ ಕಡಿಮೆ ವೆಚ್ಚದಲ್ಲಿ ಅಂದರೆ 470 ಕೋಟಿ ರು. ವೆಚ್ಚದಲ್ಲಿ ಮಂಗಳಯಾನ ನಡೆಸಿ ವಿಶ್ವದ ಗಮನ ಸೆಳೆದಿದ್ದ ಇಸ್ರೋ, ಇದೀಗ 2014ರಲ್ಲಿ ಬಿಡುಗಡೆಯಾದ ವಿಜ್ಞಾನಕ್ಕೆ ಸಂಬಂಧಿಸಿದ ಇಂಟರ್‌ಸ್ಟೆಲ್ಲರ್ ಚಿತ್ರದ ಬಜೆಟ್(1062 ಕೋಟಿ ರು.)ಗಿಂತ ಕಡಿಮೆ ವೆಚ್ಚದಲ್ಲಿ ಅಂದರೆ 800 ಕೋಟಿ ರು. ವೆಚ್ಚದಲ್ಲಿ ಚಂದ್ರಯಾನ-2 ಉಪಗ್ರಹ ಉಡಾವಣೆಗೆ ಸಿದ್ಧತೆ ನಡೆಸಿದೆ.

ನವದೆಹಲಿ: ಹಾಲಿವುಡ್‌ನ ಗ್ರಾವಿಟಿ ಚಿತ್ರದ ಬಜೆಟ್(644ಕೋಟಿ ರು.)ಗಿಂತ ಕಡಿಮೆ ವೆಚ್ಚದಲ್ಲಿ ಅಂದರೆ 470 ಕೋಟಿ ರು. ವೆಚ್ಚದಲ್ಲಿ ಮಂಗಳಯಾನ ನಡೆಸಿ ವಿಶ್ವದ ಗಮನ ಸೆಳೆದಿದ್ದ ಇಸ್ರೋ, ಇದೀಗ 2014ರಲ್ಲಿ ಬಿಡುಗಡೆಯಾದ ವಿಜ್ಞಾನಕ್ಕೆ ಸಂಬಂಧಿಸಿದ ಇಂಟರ್‌ಸ್ಟೆಲ್ಲರ್ ಚಿತ್ರದ ಬಜೆಟ್(1062 ಕೋಟಿ ರು.)ಗಿಂತ ಕಡಿಮೆ ವೆಚ್ಚದಲ್ಲಿ ಅಂದರೆ 800 ಕೋಟಿ ರು. ವೆಚ್ಚದಲ್ಲಿ ಚಂದ್ರಯಾನ-2 ಉಪಗ್ರಹ ಉಡಾವಣೆಗೆ ಸಿದ್ಧತೆ ನಡೆಸಿದೆ.

ಚಂದ್ರನ ಮೇಲ್ಮೈನಲ್ಲಿ ಸಂಚರಿಸಿ ಅಲ್ಲಿನ ವಾತಾವರಣ ಭೂಮಿಗೆ ಕಳುಹಿಸುವ ರೋವರ್‌ಅನ್ನು ಒಳಗೊಂಡ ಚಂದ್ರಯಾನ-2 ಉಪಗ್ರಹ ಏಪ್ರಿಲ್‌ನಲ್ಲಿ ಉಡಾವಣೆಯಾಗಲಿದೆ.