ಹೆಚ್ಚೆಚ್ಚು ಮಕ್ಕಳಿಗೆ ಜನ್ಮ ನೀಡುವ ಮೂಲಕ ರೋಬೋಟ್‌'ಗಳ ಮೇಲಿನ ಅವಲಂಬನೆ ತಡೆಯಬೇಕು. ಇಲ್ಲವಾದರೆ ನಿಮ್ಮ ಕೆಲಸವನ್ನು ರೋಬೋಟ್‌'ಗಳಿಗೆ ಕೊಡಬೇಕಾದೀತು ಎಂದು ಸಾರ್ವಜನಿಕರನ್ನು ಎಚ್ಚರಿಸಿದ್ದಾರೆ.
ಆಂಧ್ರಪ್ರದೇಶ(ಸೆ.07): ಜನಸಂಖ್ಯೆ ನಿಯಂತ್ರಣಕ್ಕೆ ಸರ್ಕಾರಗಳು ಜಾಗೃತಿ ಮೂಡಿಸುವ ಕಾರ್ಯದಲ್ಲಿ ತೊಡಗಿವೆ. ಆದರೆ ಆಂಧ್ರಪ್ರದೇಶ ಸಿಎಂ ಚಂದ್ರಬಾಬು ನಾಯ್ಡು ಅವರು ಇದಕ್ಕೆ ತದ್ವಿರುದ್ಧ..!
ಹೆಚ್ಚೆಚ್ಚು ಮಕ್ಕಳಿಗೆ ಜನ್ಮ ನೀಡುವ ಮೂಲಕ ರೋಬೋಟ್'ಗಳ ಮೇಲಿನ ಅವಲಂಬನೆ ತಡೆಯಬೇಕು. ಇಲ್ಲವಾದರೆ ನಿಮ್ಮ ಕೆಲಸವನ್ನು ರೋಬೋಟ್'ಗಳಿಗೆ ಕೊಡಬೇಕಾದೀತು ಎಂದು ಸಾರ್ವಜನಿಕರನ್ನು ಎಚ್ಚರಿಸಿದ್ದಾರೆ.
ಸಮಾರಂಭವೊಂದರಲ್ಲಿ ಮಾತನಾಡಿದ ಅವರು ‘ವಿದ್ಯಾವಂತ ದಂಪತಿಗಳು ಕುಟುಂಬ ಯೋಜನೆ ಅನುಸರಿಸುತ್ತಿದ್ದಾರೆ. ಇದೇ ರೀತಿ ಮುಂದುವರಿದರೆ, ರಾಜ್ಯದಲ್ಲಿ ಬರೀ ಮುದುಕರೇ ಇರಲಿದ್ದಾರೆ. ಹೀಗಾಗಿ ಆಂಧ್ರದ ನಾಗರಿಕರು ಹೆಚ್ಚುಮಕ್ಕಳನ್ನು ಹೆರಬೇಕು’ ಎಂದು ಕರೆ ನೀಡಿದ್ದಾರೆ.
