ಬಿಜೆಪಿ ತೊರೆದ ಸಂಸದ

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 18, Jul 2018, 2:58 PM IST
Chandan Mitra quits BJP
Highlights

ಬಿಜೆಪಿ ಸಂಸದರೋರ್ವರು ಇದೀಗ ಪಕ್ಷವನ್ನು ತೊರೆದಿದ್ದಾರೆ. ತಮ್ಮ ರಾಜೀನಾಮೆ ಪತ್ರವನ್ನು ಅಮಿತ್ ಶಾ ಅವರಿಗೆ ರವಾನಿಸಿದ್ದಾರೆ. 

ಕೋಲ್ಕತಾ :  ಹಿರಿಯ ಪತ್ರಕರ್ತ ಹಾಗೂ 2 ಬಾರಿ ಬಿಜೆಪಿಯಿಂದ  ಸಂಸದರಾಗಿದ್ದ ಚಂದನ್ ಮಿತ್ರಾ ಇದೀಗ ಭಾರತೀಯ ಜನತಾ ಪಾರ್ಟಿಗೆ ಗುಡ್ ಬೈ ಹೇಳಿದ್ದಾರೆ. ಅಲ್ಲದೇ ತೃಣಮೂಲ ಕಾಂಗ್ರೆಸ್ ಸೇರಲು ಸಿದ್ದರಾಗಿದ್ದಾರೆ ಎನ್ನಲಾಗಿದೆ. 

ಮೂಲಗಳ  ಪ್ರಕಾರವಾಗಿ ಮಿತ್ರಾ ಮಂಗಳವಾರ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರಿಗೆ ತಮ್ಮ ರಾಜೀನಾಮೆ ಪತ್ರವನ್ನು ರವಾನೆ ಮಾಡಿದ್ದಾರೆ. 

ಅಲ್ಲದೇ ಇದೇ ಜುಲೈ 21 ರಂದು  ಮಿತ್ರಾ ಅವರು ಟಿಎಂಸಿ ಸೇರ್ಪಡೆಯಾಗುತ್ತಿದ್ದಾರೆ.  ಅಂದು ಪಕ್ಷದ ಶಾಹಿದ್ ದಿವಸ್ ಆಚರಣೆ ಮಾಡಲಾಗುತ್ತಿದ್ದು, ಈ ಕಾರ್ಯಕ್ರಮದಲ್ಲಿ ಪಕ್ಷದ ಮುಖಂಡೆ ಮಮತಾ ಬ್ಯಾನರ್ಜಿ ನೇತೃತ್ವದಲ್ಲಿ ಪಕ್ಷ ಸೇರ್ಪಡೆಯಾಗುತ್ತಿದ್ದಾರೆ. 

ಮಿತ್ರಾ ಅವರು ಮೋದಿ ಹಾಗೂ ಅಮಿತ್ ಶಾ ನೇತೃತ್ವದಲ್ಲಿ ಸೈಡ್ ಲೈನ್ ಆಗುತ್ತಿದ್ದು ಇದರಿಂದ ನೊಂದು ಬಿಜೆಪಿ ತೊರೆಯುವ ತೀರ್ಮಾನ ಮಾಡಿದ್ದರು ಎನ್ನಲಾಗಿದೆ. ಬಿಜೆಪಿ ಹಿರಿಯ ನಾಯಕ ಎಲ್.ಕೆ ಅಡ್ವಾಣಿ ಅವರಿಗೆ ಮಿತ್ರಾ ಅವರು ಅತ್ಯಾಪ್ತರಾಗಿದ್ದರು. 

2003ರಿಂದ 2009ರವರೆಗೂ ರಾಜ್ಯಸಭಾ ಸದಸ್ಯರಾಗಿದ್ದು, 2010ರಲ್ಲಿ ಮತ್ತೊಂದು ಅವಧಿಗೆ ಎಂಪಿಯಾಗಿ ಆಯ್ಕೆಯಾಗಿದ್ದರು. 

loader