ಮಾಜಿ ಸಿಎಂ ಸಿದ್ದರಾಮಯ್ಯರಿಂದ ಅಚ್ಚರಿಯ ಹೇಳಿಕೆ

First Published 12, Jun 2018, 2:00 PM IST
Chamundeshwari Result Was Not Shocking : Siddaramaiah
Highlights

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಮುಂಡೇಶ್ವರಿ ಕ್ಷೇತ್ರದ ಸೋಲಿನ ಬಗ್ಗೆ ಅಚ್ಚರಿಯ ಹೇಳಿಕೆ ನೀಡಿದ್ದಾರೆ. ಚಾಮುಂಡೇಶ್ವರಿ ಸೋಲು ತಮಗೆ ಶಾಕಿಂಗ್ ಅಲ್ಲವೆಂದು ಅವರು ಹೇಳಿದ್ದಾರೆ. 

ಮೈಸೂರು :  ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಮುಂಡೇಶ್ವರಿ ಕ್ಷೇತ್ರದ ಸೋಲಿನ ಬಗ್ಗೆ ಅಚ್ಚರಿಯ ಹೇಳಿಕೆ ನೀಡಿದ್ದಾರೆ. ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ 2 ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡಿದ್ದ ಸಿದ್ದರಾಮಯ್ಯ ಅವರು ಬಾದಾಮಿ ಕ್ಷೇತ್ರದಲ್ಲಿ ವಿಜಯಿಯಾಗಿದ್ದು, ಚಾಮುಂಡೇಶ್ವರಿಯಲ್ಲಿ ಜೆಡಿಎಸ್ ಮುಖಂಡ ಜಿ.ಟಿ ದೇವೇಗೌಡ ಎದುರು ಸೋಲನ್ನು ಅನುಭವಿಸಿದ್ದರು. 

ಚಾಮುಂಡೇಶ್ವರಿ ಸೋಲು ನನಗೆ ಶಾಕಿಂಗ್ ಅಲ್ಲ ಎಂದು ಮೈಸೂರಿನಲ್ಲಿ ಸಿದ್ದರಾಮಯ್ಯ ಹೇಳಿದ್ದಾರೆ. ಅಲ್ಲದೇ ಇಲ್ಲಿ ಜನರು ತಮ್ಮ ಬಗ್ಗೆ ನೀಡಿರುವ ತೀರ್ಪನ್ನು ನಾನು ಸ್ವೀಕರಿಸಿದ್ದೇನೆ.  ಅದು ಈಗಾಗಲೇ ಮುಗಿದ ಹೋದ ಅಧ್ಯಾಯವಾಗಿದೆ ಎಂದಿದ್ದಾರೆ. 

ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸೋಲು ಹೇಗಾಗಿದೆ ಎನ್ನುವುದನ್ನು ತಾವು ವಿಶ್ಲೇಷಣೆ ಮಾಡಲು ಹೋಗುವುದಿಲ್ಲ. ಚಾಮುಂಡೇಶ್ವರಿ ಕ್ಷೇತ್ರದ ಜನರಿಗೆ ಕೃತಜ್ಞತೆ ಸಲ್ಲಿಸಲು ಸಭೆ ನಡೆಸುವ ಬಗ್ಗೆ ಮುಂದೆ ತೀರ್ಮಾನ ಮಾಡುವುದಾಗಿ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. 

loader