ಕ್ರಿಕೆಟರ್ ಆಗುವ ಸಲುವಾಗಿ ಈತ ಆರಿಸಿಕೊಂಡ ದಾರಿ ಯಾವುದು..?

Chain snatchers arrested in Bengaluru
Highlights

ಈತ  ಪ್ರಸಿದ್ಧ ಕ್ರಿಕೆಟ್ ಆಟಗಾರ ಆಗಬೇಕು ಎನ್ನುವ ಕನಸು ಹೊಂದಿದ್ದ. ಈತನ ಕನಸು ನನಸು ಮಾಡಿಕೊಳ್ಳಲು ಈತ ಕೈ ಹಾಕಿದ ಕೃತ್ಯವೇನು ಗೊತ್ತೆ..?

ಬೆಂಗಳೂರು :  ಓರ್ವ ತನ್ನ ಕನಸು ನನಸು ಮಾಡಿಕೊಳ್ಳಲು ಸರಗಳ್ಳತನಕ್ಕೆ ಇಳಿದರೆ, ಇನ್ನೋರ್ವ ತನ್ನ ಕುಟುಂಬಕ್ಕಾಗಿ ಇಂತಹ ಕೃತ್ಯ ಎಸಗುತ್ತಿದ್ದವ.  ಇದೀಗ ಈ ಇಬ್ಬರೂ ಕೂಡ ಪೊಲೀಸರ ಅತಿಥಿಗಳಾಗಿದ್ದಾರೆ. 

ಕ್ರಿಕೆಟರ್ ಆಗುವ ಕನಸನ್ನ‌ ನನಸು ಮಾಡಿಕೊಳ್ಳಲು ಸರಗಳ್ಳತನ ಮಾಡುತ್ತಿದ್ದವನು ಹಾಗೂ  ಮತ್ತೋರ್ವ ಸಹೋದರಿಯ ಆರೋಗ್ಯ ಮತ್ತು ಮದುವೆ ಮಾಡುವ ಸಲುವಾಗಿ ಸರಗಳ್ಳತನ ಮಾಡುತ್ತಿದ್ದ.  ಈ ಇಬ್ಬರನ್ನೂ ಕೂಡ ಜಯನಗರ ಪೊಲೀಸರಿಂದ ಬಂಧಿಸಿದ್ದಾರೆ. 

ಜಯನಗರ ಉಪವಿಭಾಗದ ಎಸಿಪಿ ಶ್ರೀನಿವಾಸ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ ಸರಗಳ್ಳರಾದ ನವೀನ್ ಶೆಟ್ಟಿ ಹಾಗೂ ಬಾಲುಕುಮಾರ್ ಅವರನ್ನು ಬಂಧಿಸಲಾಗಿದೆ.   ಪೇದೆ ಶ್ರೀನಿವಾಸ್,  ಜಯನಗರ ಠಾಣೆಯ ಸಿಬ್ಬಂದಿ  ಕೆಂಪರಾಜ್,  ಚಂದ್ರಶೇಖರ್ ಹಾಗೂ ಎಸಿಪಿ ಸ್ಕ್ವಾಡ್ ಸಿಬ್ಬಂದಿ ಸೇರಿ ಇಬ್ಬರನ್ನು ಬಂಧಿಸಿದ್ದಾರೆ. 

ಬಂಧಿತರಿಬ್ಬರೂ ಕೂಡ ಲಿಂಗರಾಜಪುರಂ ನಿವಾಸಿಗಳಾಗಿದ್ದು, ಬಂಧಿತರಿಂದ ನಡೆದ ಒಟ್ಟು 21 ಪ್ರಕರಣಗಳನ್ನು ಪತ್ತೆ ಮಾಡಲಾಗಿದೆ. ಸದ್ಯ ಇಬ್ಬರ ವಿಚಾರಣೆ ನಡೆಸಲಾಗುತ್ತಿದೆ. 

loader