Asianet Suvarna News Asianet Suvarna News

ಪಾನ್ ಮಸಾಲಗೆ ಉತ್ಪಾದನಾ ಹಂತದಲ್ಲೇ ಜಿಎಸ್’ಟಿಗೆ ಚಿಂತನೆ

ಪಾನ್ ಮಸಾಲದಂತಹ ಕೆಲವು ಉತ್ಪನ್ನಗಳ ಉತ್ಪಾದನಾ ಹಂತದಲ್ಲೇ ತೆರಿಗೆ ವಿಧಿಸಲು ಜಿಎಸ್‌ಟಿ ಮಂಡಳಿ ಚಿಂತಿಸಿದೆ. ತೆರಿಗೆ ತಪ್ಪಿಸಿಕೊಂಡು, ಕಂದಾಯಕ್ಕೆ ನಷ್ಟ ಮಾಡುವುದನ್ನು ತಡೆಯುವ ಉದ್ದೇಶದಿಂದ ಈ ಚಿಂತನೆ ನಡೆಸಲಾಗಿದೆ.

Cess likely on Pan masala at Manufacturing stage

ನವದೆಹಲಿ: ಪಾನ್ ಮಸಾಲದಂತಹ ಕೆಲವು ಉತ್ಪನ್ನಗಳ ಉತ್ಪಾದನಾ ಹಂತದಲ್ಲೇ ತೆರಿಗೆ ವಿಧಿಸಲು ಜಿಎಸ್‌ಟಿ ಮಂಡಳಿ ಚಿಂತಿಸಿದೆ. ತೆರಿಗೆ ತಪ್ಪಿಸಿಕೊಂಡು, ಕಂದಾಯಕ್ಕೆ ನಷ್ಟ ಮಾಡುವುದನ್ನು ತಡೆಯುವ ಉದ್ದೇಶದಿಂದ ಈ ಚಿಂತನೆ ನಡೆಸಲಾಗಿದೆ.

ಈ ಬಗ್ಗೆ ಜಿಎಸ್‌ಟಿ ಕಾಯ್ದೆಗೆ ತಿದ್ದುಪಡಿ ತರುವ ಪ್ರಸ್ತಾಪವಿದೆ. ಪಾನ್ ಮಸಾಲದಂತಹ ಉತ್ಪನ್ನಗಳು ಚಿಕ್ಕ ಪ್ಯಾಕೇಟ್‌ಗಳಲ್ಲಿ ಮಾರಾಟ ಮಾಡುವುದರಿಂದ, ಮಾರಾಟದ ಹಂತದಲ್ಲಿ ಈ ಸರಕುಗಳ ತೆರಿಗೆ ತಪ್ಪಿಸಿಕೊಳ್ಳುವ ಸಾಧ್ಯತೆಯಿದೆ. ಜಿಎಸ್‌ಟಿ ಮಂಡಳಿ ಸಭೆಯಲ್ಲಿ ಅಂತಿಮಗೊಂಡ ಬಳಿಕ, ಪ್ರಸ್ತಾಪವನ್ನು ಕಾನೂನು ಸಚಿವಾಲಯಕ್ಕೆ ಕಳುಹಿಸಲಾಗುತ್ತದೆ.

Follow Us:
Download App:
  • android
  • ios