ಕೇರಳದ ಕೋವಲಂ ಬೀಚ್‌ನಲ್ಲಿ 5 ಕಂಪನಿಗಳ ಸಿಇಒಗಳು 35 ನಿಮಿಷ ಕಾಲ ನೀರಿನೊಳಗೆ ಸಭೆ ನಡೆಸಿ, ಸಮುದ್ರ ಸಂಪತ್ತನ್ನು ಕಾಪಾಡುವ ಘೋಷಣೆ ಮಾಡಿದ್ದಾರೆ.
ತಿರುವನಂತಪುರ: ಕೇರಳದಲ್ಲಿ 5 ಕಂಪನಿಗಳ ಸಿಇಒಗಳು ಸಮುದ್ರದ ನೀರಿನೊಳಗೇ ಸಭೆ ನಡೆಸುವ ಮೂಲಕ ಜಗತ್ತಿನ ಗಮನ ಸೆಳೆಯುವ ಯತ್ನ ಮಾಡಿದ್ದಾರೆ.
ನಿಜ. ಸೋಮವಾರ ಇಲ್ಲಿನ ಕೋವಲಂ ಬೀಚ್ನಲ್ಲಿ 5 ಕಂಪನಿಗಳ ಸಿಇಒಗಳು 35 ನಿಮಿಷ ಕಾಲ ನೀರಿನೊಳಗೆ ಸಭೆ ನಡೆಸಿ, ಸಮುದ್ರ ಸಂಪತ್ತನ್ನು ಕಾಪಾಡುವ ಘೋಷಣೆ ಮಾಡಿದ್ದಾರೆ.
‘ಓಷನ್ ಲವ್' ಹೆಸರಿನ ಈ ಕಾರ್ಯ ಕ್ರಮದಲ್ಲಿ ಉದಯ ಸಮುದ್ರ ಹೋಟೆಲ್ನ ಮುಖ್ಯಸ್ಥೆ ಹೇಮಾ ಮೆನನ್, ಟಿಸಿಎಸ್ನ ದಿನೇಶ್ ಪಿ.ಥಂಪಿ, ಏವೋನ್ ಮೊಬಿಲಿಟಿಯ ರೋನಿ, ನಿಯೋಲಾಜಿಕ್ಸ್ನ ಶ್ಯಾಮ್, ಯುಡಿಎಸ್ ಗ್ರೂಪ್ ಆಫ್ ಹೋಟೆಲ್ನ ರಾಜ್ಗೋಪಾಲ್ ಭಾಗಿಯಾಗಿದ್ದರು.
