ಬಯಲು ಶೌಚಮುಕ್ತ ಜಿಲ್ಲೆಯನ್ನಾಗಿಸಲು ದಾವಣಿಗೆರೆ ಜಿಲ್ಲಾ ಪಂಚಾಯತ್ ವಿಭಿನ್ನ ಪ್ರಯತ್ನ ಮಾಡುತ್ತಿದೆ. ಅಲ್ಲಿನ ಸಿಇಒ ಹೊಸ ಹೊಸ ರೀತಿಯಲ್ಲಿ ಜಾಗೃತಿ ಹಾಗೂ ಶೌಚಾಲಯ ನಿರ್ಮಾಣಕ್ಕೆ ಜನರನ್ನು ಪ್ರೇರೇಪಿಸುತ್ತಿದ್ದಾರೆ. ಇದೀಗ ಒಂದು ವಿಭಿನ್ನ ಹೆಜ್ಜೆ ಇಟ್ಟಿದ್ದಾರೆ.. ಶೌಚ ನಿರ್ಮಾಣಕ್ಕೆ ಕಾರಣೀಕರ್ತರಾದವರಿಗೆ ಸೀಮಂತ ಸಮಾರಂಭ ಆಯೋಜಿಸಿದೆ. 

ದಾವಣಗೆರೆ(ಆ.23): ದಾವಣಗೆರೆ ಜಿಲ್ಲೆಯನ್ನ ಬಯಲು ಬಹಿರ್ದೆಸೆ ಮುಕ್ತ ಜಿಲ್ಲೆ ಮಾಡಬೇಕು ಅನ್ನೋದು ಸಿಇಒ ಎಸ್. ಅಶ್ವತಿ ಮೇಡಂ ಕನಸು. ಇದಕ್ಕಾಗಿ ಸಿಕ್ಕಾಪಟ್ಟೆ ಪ್ರಯತ್ನ ಮಾಡ್ತಿದ್ದಾರೆ.. ಇದೇ ದಿಸೆಯಲ್ಲಿ ಇನ್ನೂ ಒಂದ್ ಹೆಜ್ಜೆ ಮುಂದಿಟ್ಟಿದ್ದಾರೆ. ಶಾಚಾಲಯ ನಿರ್ಮಾಣಕ್ಕೆ ಪ್ರೋತ್ಸಾಹಿಸಲು ವಿಶೇಷ ಕಾರ್ಯಕ್ರಮವೊಂದನ್ನ ಹಮ್ಮಿಕೊಂಡಿದ್ದಾರೆ. ಅದುವೇ ಸೀಮಂತ ಸಮಾರಂಭ.

ಕಳೆದ ಒಂದು ವಾರದ ಹಿಂದೆಯಷ್ಟೇ ಕೈದಾಳೆ ಗ್ರಾಮದಲ್ಲಿ ಶೌಚಾಲಯ ನಿರ್ಮಿಸಿಕೊಂಡ ಇಬ್ಬರು ಗರ್ಭಿಣಿಯರಿಗೆ ಜಿಲ್ಲಾಪಂಚಾಯತ್​ನಿಂದ ವಿಶೇಷ ಸೀಮಂತ ಕಾರ್ಯ ಮಾಡಿದ್ದರು. ಇದೀಗ ಜಿಲ್ಲೆಯ 6 ತಾಲೂಕುಗಳಲ್ಲಿ ಶೌಚಾಲಯ ನಿರ್ಮಿಸಿಕೊಂಡ 249 ಗರ್ಭಿಣಿಯರಿಗೆ ಸೀಮಂತ ಸಮಾರಂಭ ಆಯೋಜಿಸಿದೆ. ಇದಕ್ಕೆ ಬೇಕಾದ ಸೀರೆ, ಗಾಜಿನ ಬಳೆ ಸೇರಿದಂತೆ ಎಲ್ಲಾ ಸಾಮಗ್ರಿಗಳನ್ನ ಸ್ವತಃ ಸಿಇಒ ಅಶ್ವತಿಯವರೇ ಮುಂದೆ ನಿಂತು ಖರೀದಿ ಮಾಡಿದ್ದಾರೆ. ಸರ್ಕಾರಿ ಸಮುದಾಯಭವನದಲ್ಲಿ ಇಂದು ಇಂದು ಸಂಪ್ರದಾಯ ಬದ್ಧವಾಗಿ ಸೀಮಂತ ಕಾರ್ಯ ನಡೆಯಲಿದೆ.

ಶೌಚಾಲಯ ನಿರ್ಮಿಸಿಕೊಂಡ ಬಾಣಂತಿಯರಿಗೂ ಸನ್ಮಾನಿಸಲಾಗುತ್ತಿದೆ.. ಮನೆಯಲ್ಲಿ ಶೌಚಾಲಯ ಬೇಕೇ ಬೇಕು ಎಂದು ಪಟ್ಟು ಹಿಡಿದ 176 ಶಾಲಾ ವಿದ್ಯಾರ್ಥಿಳಿಗೂ ಗೌರವಿಸಿಲಾಗುತ್ತಿದೆ.

ಒಟ್ಟಿನಲ್ಲಿ ಇಡೀ ಜಿಲ್ಲೆಯನ್ನು ಬಯಲು ಶೌಚ ಮುಕ್ತ ಂಆಡೋ ಕನಸು ಕಂಡ ಸಿಇಓ ಅವರು ಏನೆಲ್ಲ ಕಸರತ್ತು ಮಾಡ್ತಿದ್ದಾರೆ. ಆದಷ್ಟು ಬೇಗ ಇವರಿಗೆ ಯಶಸ್ಸು ಸಿಗಲಿ.. ಜನರು ಇವಳ ಕಳಕಳಿ ಹಾಗೂ ಕಾಳಜಿಗೆ ಸ್ಪಂದಿಸಬೇಕಿದೆ.