ಮಯನ್ಮಾರಿನಲ್ಲಿ ನೆಲೆಯಿಲ್ಲದೇ ನಿರಾಶ್ರಿತರಾಗಿ ಅತಂತ್ರ ಪರಿಸ್ಥಿತಿ ಎದುರಿಸುತ್ತಿರುವ ರೋಹಿಂಗ್ಯಾ ಮುಸಲ್ಮಾನರಿಗೆ ಭಾರತದಲ್ಲಿ ಆಶ್ರಯ ನೀಡುವುದು ದೇಶದ ಭದ್ರತೆಗೆ ಕಂಟಕವಾಗಲಿದೆ ಎಂದು ಕೇಂದ್ರ ಗೃಹ ಸಚಿವಾಲಯ ಸುಪ್ರೀಂಕೋರ್ಟ್’ಗೆ ಅಫಿಡವಿಟ್ ಸಲ್ಲಿಸಿದೆ.
ನವದೆಹಲಿ (ಸೆ.18): ಮಯನ್ಮಾರಿನಲ್ಲಿ ನೆಲೆಯಿಲ್ಲದೇ ನಿರಾಶ್ರಿತರಾಗಿ ಅತಂತ್ರ ಪರಿಸ್ಥಿತಿ ಎದುರಿಸುತ್ತಿರುವ ರೋಹಿಂಗ್ಯಾ ಮುಸಲ್ಮಾನರಿಗೆ ಭಾರತದಲ್ಲಿ ಆಶ್ರಯ ನೀಡುವುದು ದೇಶದ ಭದ್ರತೆಗೆ ಕಂಟಕವಾಗಲಿದೆ ಎಂದು ಕೇಂದ್ರ ಗೃಹ ಸಚಿವಾಲಯ ಸುಪ್ರೀಂಕೋರ್ಟ್’ಗೆ ಅಫಿಡವಿಟ್ ಸಲ್ಲಿಸಿದೆ.
ರೋಹಿಂಗ್ಯಾ ನಿರಾಶ್ರಿತರು ಪಾಕಿಸ್ತಾನದ ಐಸಿಎಸ್ ಜೊತೆ ಸಂಪರ್ಕ ಹೊಂದಿದ್ದಾರೆ. ಇವರನ್ನು ದೇಶದೊಳಗೆ ಇರಲು ಬಿಡುವುದು ದೇಶಕ್ಕೆ ಕಂಟಕವಾಗಲಿದೆ. ಅವರು ಇಲ್ಲಿರುವುದು ಕೂಡಾ ಅಕ್ರಮ ಎಂದು ಕೇಂದ್ರ ಸರ್ಕಾರ ಹೇಳಿದೆ.
ಸರ್ಕಾರ ಈಗಾಗಲೇ ಗೌಪ್ಯ ವರದಿಯನ್ನು ತಯಾರಿಸಿಕೊಂಡಿದ್ದು, ಕೋರ್ಟ್ ಬಯಸಿದರೆ ಅದನ್ನು ಅ.03 ರಂದು ಸಲ್ಲಿಸುತ್ತದೆ. ಫಾಲಿ ನಾರಿಮನ್ ಹಾಗೂ ಕಪಿಲ್ ಸಿಬಲ್ ವಾದ ಮಂಡಿಸುತ್ತಿದ್ದಾರೆ.
ರೋಹಿಂಗ್ಯಾ ನಿರಾಶ್ರಿತರಿಗೆ ಭಾರತದಲ್ಲಿ ಅವಕಾಶ ಕೊಡದಿರಲು ಕಾರಣಗಳು
- ಭಾರತದಲ್ಲಿ ಉಳಿದುಕೊಂಡಿರುವ ಸುಮಾರು 40 ಸಾವಿರ ರೋಹಿಂಗ್ಯಾಗಳು ದೇಶದ ಭದ್ರತೆಗೆ ಕಂಟಕವಾಗಲಿದ್ದಾರೆ.
- ರೋಹಿಂಗ್ಯಾಗಳು ಐಸಿಎಸ್ ಹಾಗೂ ಇತರೆ ಸಂಘಟನೆಗಳೊಂದಿಗೆ ಸಂಬಂಧವನ್ನು ಹೊಂದಿದ್ದು ಭಾರತದಲ್ಲಿ ಕೋಮುವಾದವನ್ನು ಹರಡಲು ಪ್ರಯತ್ನಿಸುತ್ತಿದ್ದಾರೆ.
- ಇವರು ದೇಶದ್ರೋಹಿ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದಾರೆ. ಭಾರತದಲ್ಲಿ ನಕಲಿ ಗುರುತಿನ ಪತ್ರ ಪಡೆದು ಹವಾಲಾ ಮೂಲಕ ಹಣ ಪಡೆಯುತ್ತಾರೆ.
