ಈ ರೀತಿ ಬಂಕ್‌ ಬಂದ್‌ ಮಾಡಕೂಡದು ಎಂದು ಕೇಂದ್ರ ಸರ್ಕಾರ ತಾಕೀತು ಮಾಡಿದೆ ಹಾಗೂ ಇಂಥ ಕ್ರಮಗಳು ಜನರಿಗೆ ಅನಾನುಕೂಲ ತರುತ್ತವೆ ಎಂದು ಹೇಳಿದೆ.

ನವದೆಹಲಿ: ‘ಪ್ರಧಾನಿ ಮೋದಿ ಅವರು ತೈಲ ಮಿತವ್ಯವಕ್ಕೆ ಕರೆ ನೀಡಿದ್ದಾರೆ' ಎಂಬ ಕಾರಣ ಹೇಳಿ ಮೇ 14ರಿಂದ ಪ್ರತಿ ಭಾನುವಾರ ಪೆಟ್ರೋಲ್‌ ಬಂಕ್‌ಗೆ ರಜೆ ಸಾರುವುದಾಗಿ ಹೇಳಿದ್ದ ಕೆಲವು ಪೆಟ್ರೋಲಿಯಂ ಡೀಲರ್‌ಗಳ ಸಂಘಗಳನ್ನು ಖುದ್ದು ಕೇಂದ್ರ ಸರ್ಕಾರ ತರಾಟೆಗೆ ತೆಗೆದುಕೊಂಡಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಜೊತೆಗೆ ಈ ರೀತಿ ಬಂಕ್‌ ಬಂದ್‌ ಮಾಡಕೂಡದು ಎಂದು ತಾಕೀತು ಮಾಡಿದೆ. ಇಂಥ ಕ್ರಮಗಳು ಜನರಿಗೆ ಅನಾನುಕೂಲ ತರುತ್ತವೆ ಎಂದು ಹೇಳಿದೆ.

ಕರ್ನಾಟಕ ಸೇರಿದಂತೆ 8 ರಾಜ್ಯಗಳಲ್ಲಿ ಭಾನುವಾರ ಬಂಕ್‌ ಬಂದ್‌ಗೆ ನಿರ್ಧರಿಸಲಾಗಿತ್ತು.

(ಸಾಂದರ್ಭಿಕ ಚಿತ್ರ)