Asianet Suvarna News Asianet Suvarna News

ನಿಮ್ಮ ಊರಿಗೂ ಬರುತ್ತೆ ‘ಮೆಟ್ರೋಲೈಟ್‌’ ರೈಲು

ನಿಮ್ಮೂರಿಗೂ ಇನ್ನು ಮೆಟ್ರೋ ರೈಲು ಬರಲಿದೆ. ನೀವೂ ಕೂಡ ಅದರಲ್ಲಿ ಸಂಚಾರ ಮಾಡುವ ಅವಕಾಶವನ್ನು ಶೀಘ್ರ ಕೆಂದ್ರ ಸರ್ಕಾರ ಮುಂದಾಗಿದೆ.

Centre proposes Metrolite train for small cities
Author
Bengaluru, First Published Jul 22, 2019, 7:35 AM IST

ನವದೆಹಲಿ [ಜು.22] : ಮಹಾನಗರಗಳಲ್ಲಿ ಮೆಟ್ರೋ ರೈಲು ಸಂಚಾರ ಸೇವೆಗೆ ದೊರೆಯುತ್ತಿರುವ ಪ್ರತಿಕ್ರಿಯೆಯಿಂದ ಉತ್ತೇಜಿತವಾಗಿರುವ ಕೇಂದ್ರ ಸರ್ಕಾರ, ಸಣ್ಣ ನಗರ ಹಾಗೂ ಪಟ್ಟಣಗಳಲ್ಲೂ ಇದೇ ರೀತಿಯ, ಆದರೆ ಅಗ್ಗದ ಹಗುರ ನಗರ ರೈಲು ಸಂಚಾರ ವ್ಯವಸ್ಥೆ ಜಾರಿಗೆ ಮುಂದಾಗಿದೆ. ‘ಮೆಟ್ರೋಲೈಟ್‌’ ಎಂಬ ಹೆಸರಿನ ಈ ಯೋಜನೆ ಮೆಟ್ರೋ ರೈಲಿನಷ್ಟುದುಬಾರಿಯಲ್ಲ. ಕಡಿಮೆ ವೆಚ್ಚದಲ್ಲಿ ರಸ್ತೆಗಳ ಮಧ್ಯಭಾಗದಲ್ಲೇ ಅನುಷ್ಠಾನಕ್ಕೆ ತರಬಹುದಾಗಿದೆ. ಇದನ್ನು ಅಳವಡಿಸಿಕೊಳ್ಳುವ ನಗರಗಳಿಗೆ ಆರ್ಥಿಕ ಸಹಾಯ ನೀಡಲೂ ಸರ್ಕಾರ ಹೊರಟಿದೆ.

ರಸ್ತೆಗಳ ಮಧ್ಯಭಾಗ ಹಾಗೂ ಎಲಿವೇಟೆಡ್‌ ಮಾರ್ಗ ನಿರ್ಮಿಸಿ ಮೆಟ್ರೋಲೈಟ್‌ ಸಂಚಾರಕ್ಕೆ ಅನುಮತಿ ನೀಡುವ ಸಂಬಂಧ ಕೇಂದ್ರ ವಸತಿ ಹಾಗೂ ನಗರಾಭಿವೃದ್ಧಿ ಸಚಿವಾಲಯ ಮಾನದಂಡಗಳನ್ನು ರೂಪಿಸಿ ಬಿಡುಗಡೆ ಮಾಡಿದೆ.

ದೊಡ್ಡ ದೊಡ್ಡ ನಗರಗಳಲ್ಲಿ ಮೆಟ್ರೋ ಯೋಜನೆ ಜಾರಿಯಾಗುತ್ತಿದೆ. ಆದರೆ ಹೆಚ್ಚಿನ ಪ್ರಮಾಣದ ಪ್ರಯಾಣಿಕರು ಇಲ್ಲದ ಸಣ್ಣ ನಗರ ಹಾಗೂ ಪಟ್ಟಣಗಳು ಕೂಡ ರೈಲು ಆಧರಿತ ಸಮೂಹ ಸಾರಿಗೆ ವ್ಯವಸ್ಥೆ ಅಳವಡಿಕೆಗೆ ಒಲವು ತೋರುತ್ತಿವೆ. ಅಂತಹ ನಗರಗಳಲ್ಲಿ ಮೆಟ್ರೋಲೈಟ್‌ ಆರಂಭಿಸುವ ಉದ್ದೇಶ ಸರ್ಕಾರದ್ದು. ಮೆಟ್ರೋಲೈಟ್‌ ರೈಲಿನಲ್ಲಿ 3 ಬೋಗಿಗಳು ಇರುತ್ತವೆ. 300 ಮಂದಿ ಪ್ರಯಾಣಿಸಬಹುದಾಗಿರುತ್ತದೆ.

ರಸ್ತೆಗಳ ಮಧ್ಯೆ ಈ ಮಾರ್ಗ ನಿರ್ಮಿಸಬಹುದಾಗಿದೆ. ಅಗತ್ಯಬಿದ್ದರೆ ಮೆಟ್ರೋಲೈಟ್‌ ಮಾರ್ಗಕ್ಕೆ ಬೇಲಿ ಹಾಕಿಕೊಳ್ಳಬಹುದು. ಚಾವಣಿ ಹೊಂದಿದ ಪ್ಲಾಟ್‌ಫಾಮ್‌ರ್‍ಗಳನ್ನು ನಿರ್ಮಿಸಲಾಗುತ್ತದೆ. ಮೆಟ್ರೋ ರೈಲಿನ ರೀತಿ ಸ್ವಯಂಚಾಲಿತ ಗೇಟುಗಳು ಇರುವುದಿಲ್ಲ. ಎಕ್ಸ್‌-ರೇ ಹಾಗೂ ಬ್ಯಾಗೇಜ್‌ ಸ್ಕಾ್ಯನರ್‌ ಕೂಡ ಇರುವುದಿಲ್ಲ. ಸಾಮಾನ್ಯ ರೈಲಿನಲ್ಲಿರುವಂತೆಯೇ ಇಲ್ಲೂ ರೈಲಿನೊಳಕ್ಕೇ ಟಿಕೆಟ್‌ ಪರಿಶೀಲಕರು ಬರುತ್ತಾರೆ. ಟಿಕೆಟ್‌ ಪಡೆದಿಲ್ಲದ ಪ್ರಯಾಣಿಕರಿಗೆ ದಂಡ ವಿಧಿಸುವ ಕೆಲಸ ಮಾಡಲಿದ್ದಾರೆ. ಈ ರೈಲು ಗಂಟೆಗೆ ಗರಿಷ್ಠ 60 ಕಿ.ಮೀ. ವೇಗದಲ್ಲಿ ಚಲಿಸಬಲ್ಲದು. ರೈಲಿನೊಳಗಿನ ಸಿಗ್ನಲ್‌ ವೈಫಲ್ಯ ಅನುಭವಿಸಿದರೂ ಗಂಟೆಗೆ 25 ಕಿ.ಮೀ. ವೇಗದಲ್ಲಿ ಸಾಗಬಹುದು ಎಂದು ಮಾನದಂಡಗಳು ವಿವರಿಸಿವೆ. ಸಾಮಾನ್ಯ ಮೆಟ್ರೋ ಮಾರ್ಗಕ್ಕೆ ಹೋಲಿಸಿದರೆ ಇವುಗಳ ವೆಚ್ಚ ಶೇ.40ರಷ್ಟುಕಡಿಮೆ. ಹೀಗಾಗಿ ಇವು ಆರ್ಥಿಕವಾಗಿ ಕಾರ್ಯಸಾಧುವಾಗಬಲ್ಲದು ಎಂಬುದು ಸರ್ಕಾರದ ಚಿಂತನೆ.

Follow Us:
Download App:
  • android
  • ios