ಧೂಮಪಾನವನ್ನು ಬಿಡಲು ಇಚ್ಛಿಸುತ್ತಿದ್ದರೂ ಕೂಡ ಸಾಧ್ಯವಾಗದೇ ಸಮಸ್ಯೆ ಎದುರಿಸುತ್ತಿರುವವರಿಗಾಗಿ ತಂಬಾಕು ಉತ್ಪನ್ನಗಳ ಪಾಕೆಟ್ ಮೇಲೆ ಟೋಲ್ – ಫ್ರಿ ಸಂಖ್ಯೆಯೊಂದನ್ನು ಮುದ್ರಿಸಲು ತೀರ್ಮಾನಿಸಿದೆ.
ನವದೆಹಲಿ(ಡಿ.3): ವಿನೂತನ ಕಾರ್ಯಗಳನ್ನು ಕೈಗೊಳ್ಳುತ್ತಿರುವ ಕೇಂದ್ರ ಸರ್ಕಾರ ಮತ್ತೊಂದು ಕಾರ್ಯಕ್ಕೆ ಯೋಜನೆ ರೂಪಿಸುತ್ತಿದೆ. ಇದೀಗ ಕೇಂದ್ರ ಸರ್ಕಾರವೂ ಧೂಮಪಾನಿಗಳ ಪರವಾಗಿ ಹೊಸದಾಗಿ ಕೆಲಸವೊಂದನ್ನು ಕೈಗೆತ್ತಿಕೊಳ್ಳುತ್ತಿದೆ.
ಧೂಮಪಾನ ಪರ ಎಂದರೆ ಅವರಿಗೆ ಬೆಂಬಲ ನೀಡುವುದಲ್ಲ. ಬದಲಿಗೆ ಧೂಮಪಾನವನ್ನು ಬಿಡಲು ಇಚ್ಛಿಸುತ್ತಿದ್ದರೂ ಕೂಡ ಸಾಧ್ಯವಾಗದೇ ಸಮಸ್ಯೆ ಎದುರಿಸುತ್ತಿರುವವರಿಗಾಗಿ ತಂಬಾಕು ಉತ್ಪನ್ನಗಳ ಪಾಕೆಟ್ ಮೇಲೆ ಟೋಲ್ – ಫ್ರಿ ಸಂಖ್ಯೆಯೊಂದನ್ನು ಮುದ್ರಿಸಲು ತೀರ್ಮಾನಿಸಿದೆ.
ಸಂಖ್ಯೆಗೆ ಕರೆ ಮಾಡಿದಲ್ಲಿ ಯಾವುದೇ ರೀತಿಯಾದ ದರ ಕಡಿತವಿಲ್ಲದೇ ಉಚಿತವಾಗಿ ಸಲಹೆ ಸೂಚನೆಗಳನ್ನು ಪಡೆದುಕೊಳ್ಳಬಹುದಾಗಿದೆ. 1800 – 227787 ಸಂಖ್ಯೆಗೆ ಕರೆ ಮಾಡಿದಾಗ ತಂಬಾಕು ಉತ್ಪನ್ನಗಳಿಂದಾಗುವ ಸಮಸ್ಯೆಗಳ ಬಗ್ಗೆ ತಿಳಿಸಿ ಅದನ್ನು ತ್ಯಜಿಸಲು ಸಲಹೆ ನೀಡಲಾಗುತ್ತದೆ.
2015ರಲ್ಲಿ ಕೇಂದ್ರ ಆರೋಗ್ಯ ಸಚಿವಾಲಯವು ತಂಬಾಕು ಉತ್ಪನ್ನಗಳ ಪಾಕೆಟ್ ಮೇಲೆ ಶೇ.85ರಚ್ಟು ಭಾಗ ಎಚ್ಚರಿಕೆ ಸಂದೇಶಗಳನ್ನು 2016ರ ಏಪ್ರಿಲ್ 1 ರಿಂದ ಮುದ್ರಣ ಮಾಡುವುದನ್ನು ಕಡ್ಡಾಯಗೊಳಿಸಿತ್ತು. ಇದೀಗ ಈ ಸಾಲಿಗೆ ಸಹಾಯವಾಣಿ ಸಂಖ್ಯೆಯೂ ಕೂಡ ಸೇರ್ಪಡೆಯಾಗುಲಿದೆ.
