ರಕ್ಷಣಾ ವಲಯದಲ್ಲಿ ವಿದೇಶಿ ಬಂಡವಾಳ ಹೂಡಿಕೆ ಹೆಚ್ಚಿಸುವ ನಿಟ್ಟಿನಲ್ಲಿ ನಿಯಮಗಳನ್ನು ಸಡಿಲಿಸಲು ಕೇಂದ್ರ ಸರ್ಕಾರ ಮುಂದಾಗಿದೆ. ಮುಂದಿನ 5 ವರ್ಷಗಳಲ್ಲಿ ರಕ್ಷಣಾ ಕ್ಷೇತ್ರದಲ್ಲಿ ರೂ. 35000 ಕೋಟಿ ಬಂಡವಾಳವನ್ನು ಆಕರ್ಷಿಸುವ ನಿಟ್ಟಿನಲ್ಲಿ, ಹಾಲಿ ನಿಯಮಗಳನ್ನು ಇನ್ನೂ ಸಡಿಲಿಸಲಾಗುವುದೆಂದು ವರದಿಯಾಗಿದೆ.
ನವದೆಹಲಿ: ರಕ್ಷಣಾ ವಲಯದಲ್ಲಿ ವಿದೇಶಿ ಬಂಡವಾಳ ಹೂಡಿಕೆ ಹೆಚ್ಚಿಸುವ ನಿಟ್ಟಿನಲ್ಲಿ ನಿಯಮಗಳನ್ನು ಸಡಿಲಿಸಲು ಕೇಂದ್ರ ಸರ್ಕಾರ ಮುಂದಾಗಿದೆ.
ಮುಂದಿನ 5 ವರ್ಷಗಳಲ್ಲಿ ರಕ್ಷಣಾ ಕ್ಷೇತ್ರದಲ್ಲಿ ರೂ. 35000 ಕೋಟಿ ಬಂಡವಾಳವನ್ನು ಆಕರ್ಷಿಸುವ ನಿಟ್ಟಿನಲ್ಲಿ, ಹಾಲಿ ನಿಯಮಗಳನ್ನು ಇನ್ನೂ ಸಡಿಲಿಸಲಾಗುವುದೆಂದು ವರದಿಯಾಗಿದೆ.
ಹೊಸ ನೀತಿಯಡಿಯಲ್ಲಿ ಟ್ಯಾಂಕ್, ಶಸ್ತ್ರಸಜ್ಜಿತ ವಾಹನಗಳು ಹಾಗೂ ಮಿಲಿಟರಿ ಸಾಗಾಟ ವಿಮಾನಗಳನ್ನು ಭಾರತದಲ್ಲೇ ತಯಾರಿಸಲು ಸ್ವಯಂನಿರ್ವಹಣಾ (ಅಟೋಮ್ಯಾಟಿಕ್) ವ್ಯವಸ್ಥೆ ಮೂಲಕ ಶೇ. 100ರಷ್ಟು ವಿದೇಶಿ ಬಂಡವಾಳಕ್ಕೆ ಅನುವು ಮಾಡಿಕೊಡಲಾಗುವುದೆಂದು ವರದಿ ಹೇಳಿದೆ.
ಯುದ್ಧ ವಿಮಾನ ಹಾಗೂ ಹೆಲಿಕಾಪ್ಟರ್ ನಿರ್ಮಾಣ ಕ್ಷೇತ್ರದಲ್ಲಿ ಶೇ. 76ರಷ್ಟು ಹಾಗೂ ಸಬ್’ಮೆರಿನ್ ಮತ್ತು ಯುದ್ಧನೌಕೆ ನಿರ್ಮಾಣ ಕ್ಷೇತ್ರದಲ್ಲಿ ಶೇ. 51 ಎಫ್’ಡಿಐಗೆ ಅವಕಾಶ ಮಾಡಿಕೊಡಲಾಗುವುದು.
ರಕ್ಷಣಾ ಕ್ಷೇತ್ರದಲ್ಲಿ ವಿದೇಶಿ ಬಂಡವಾಳ ಹೂಡಿಕೆ ಹೆಚ್ಚಿಸುವ ಮೂಲಕ, ಯುದ್ಧ ಸಾಮಾಗ್ರಿಗಳನ್ನು ಆಮದು ಮಾಡುವ ಪ್ರಮಾಣದಲ್ಲಿ ಭಾರೀ ಕಡಿತವಾಗಲಿದೆ ಹಾಗೂ ಉದ್ಯೋಗಾವಕಾಶಗಳನ್ನೂ ಹೆಚ್ಚಿಸಲಿದೆ ಎಂದು ಹೇಳಲಾಗಿದೆ.
ಆದಷ್ಟು ಶೀಘ್ರದಲ್ಲೇ ಈ ಬಗ್ಗೆ ಸರ್ಕಾರ ಅಂತಿಮ ನಿರ್ಧಾರ ಕೈಗೊಳ್ಳಲಿದೆಯೆಂದು ವರದಿ ಹೇಳಿದೆ.
