ಬೆಂಗಳೂರು (ಸೆ.12): ಕಾವೇರಿ ವಿವಾದದ ಪರಿಹಾರದ ಬಗ್ಗೆ ಕೇಂದ್ರ ಸಚಿವ ವೆಂಕಯ್ಯನಾಯ್ಡು ತುಟಿಕ್ ಪಿಟಿಕ್ ಎನ್ನುತ್ತಿಲ್ಲ. ಪ್ರಧಾನಿ ಮಧ್ಯಸ್ಥಿಕೆ ಬಗ್ಗೆ ಚಕಾರವೆತ್ತಲಿಲ್ಲ. ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡುವಂತೆ ಉಭಯ ರಾಜ್ಯಗಳಲ್ಲಿ ಮನವಿ ಮಾಡಿದ್ದಾರೆ.
ಎರಡೂ ರಾಜ್ಯಗಳು ನ್ಯಾಯಾಲಯಗಳಲ್ಲಿ ನ್ಯಾಯ ಪಡೆದುಕೊಳ್ಳಲಿ. ನ್ಯಾಯಾಲಯದ ಹೊರತು ಬೇರೆ ಮಾರ್ಗಗಳಿಲ್ಲ. ಬೀದಿಗಳಲ್ಲಿ ನಿಂತು ಹೋರಾಟ ನಡೆಸುವುದರಿಂದ ಪರಿಹಾರ ಸಾಧ್ಯವಿಲ್ಲ ಎಂದು ವೆಂಕಯ್ಯನಾಯ್ಡು ಹೇಳಿದ್ದಾರೆ.
ಮಾಧ್ಯಮಗಳ ವಿರುದ್ಧವೂ ಕಿಡಿ ಕಾರಿದ ವೆಂಕಯ್ಯನಾಯ್ಡು
ಗಲಾಟೆಗಳನ್ನು ತೋರಿಸದಂತೆ ಮಾಧ್ಯಮಗಳಿಗೆ ವೆಂಕಯ್ಯನಾಯ್ಡು ಮನವಿ ಮಾಡಿದ್ದಾರೆ. ಮಾಧ್ಯಮಗಳು ಶಾಂತಿ ನೆಲಸುವಂತೆ ವರದಿ ಮಾಡಬೇಕು. ವಿನಾಕಾರಣ ದೃಶ್ಯಗಳ ಮೂಲಕ ಗಲಾಟೆಗೆ ಪ್ರಚೋದನೆ ನೀಡಬಾರದು.
ಎರಡೂ ರಾಜ್ಯಗಳ ನಾಯಕರು ಒಂದೆಡೆ ಕೂತು ಪರಿಹರಿಸಿಕೊಳ್ಳಲಿ ಎಂದಿದ್ದಾರೆ.
