ಸೋಗಲಾಡಿ ಸಿದ್ದಣ್ಣಗೆ ನಮ್ಮ ಎದುರು ಬಂದು ನಿಲ್ಲುವ ಧೈರ್ಯವಿಲ್ಲ. ಎರಡು ಶಬ್ಧ ಬರೆದು ರಾಜಕಾರಣಿಗಳ ಬೂಟಿನ ಕಾಲಿನ ಕೆಳಗೆ ಇಡುವ ಗಂಜಿ ಗಿರಾಕಿಗಳಾಗಿರೋ ಸಾಹಿತಿಗಳನ್ನ ಕರೆ ತಂದು ಸಿದ್ದರಾಮಯ್ಯ ಭಾಷಣ ಮಾಡಿಸುತ್ತಿದ್ದಾರೆ ಎಂದು ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆ ಸಿಎಂ ವಿರುದ್ಧ ವಾಗ್ದಾಳಿ ಮುಂದುವರೆಸಿದ್ದಾರೆ.
ಬಾಗಲಕೋಟೆ (ನ.28): ಸೋಗಲಾಡಿ ಸಿದ್ದಣ್ಣಗೆ ನಮ್ಮ ಎದುರು ಬಂದು ನಿಲ್ಲುವ ಧೈರ್ಯವಿಲ್ಲ. ಎರಡು ಶಬ್ಧ ಬರೆದು ರಾಜಕಾರಣಿಗಳ ಬೂಟಿನ ಕಾಲಿನ ಕೆಳಗೆ ಇಡುವ ಗಂಜಿ ಗಿರಾಕಿಗಳಾಗಿರೋ ಸಾಹಿತಿಗಳನ್ನ ಕರೆ ತಂದು ಸಿದ್ದರಾಮಯ್ಯ ಭಾಷಣ ಮಾಡಿಸುತ್ತಿದ್ದಾರೆ ಎಂದು ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆ ಸಿಎಂ ವಿರುದ್ಧ ವಾಗ್ದಾಳಿ ಮುಂದುವರೆಸಿದ್ದಾರೆ.
ಚಪ್ರಾಸಿ ಸಾಹಿತಿಗಳನ್ನ ಇಟ್ಟುಕೊಂಡು ತಮಗೆ ಬೇಕಾದ್ದನ್ನು ಸಿದ್ದರಾಮಯ್ಯ ಮಾತನಾಡಿಸುತ್ತಾರೆ. ದೇಶದಲ್ಲಿ ಎರಡು ರೀತಿಯ ಜನರಿಗೆ ಉಳಿಗಾಲವಿಲ್ಲ. ಒಂದು ಎಡಬಿಡಂಗಿ ಸಾಹಿತಿಗಳು, ಮತ್ತೊಂದು ದೇಶಕ್ಕೆ ಬಾಂಬ್ ಹಾಕುವ ದೇಶದ್ರೋಹಿಗಳು ಎಂದು ಅನಂತ್ ಕುಮಾರ್ ಹೇಳಿದ್ದಾರೆ.
ಸಿದ್ದರಾಮಯ್ಯಗೆ ಕನಸು ಬೀಳಲು ಶುರುವಾಗಿದೆ. ಸಿದ್ದುಗೆ ಬಣ್ಣಬಣ್ಣದ ಮೇಟಿ ಕನಸುಗಳು ಬೀಳುತ್ತಿವೆ. ಸಿದ್ದುಗೆ ಮೇಟಿ ಕನಸು, ಗುಂಡಿನ ಕನಸು ಬಿಟ್ಟು ಬೇರೆ ಕನಸು ಬೀಳೋದೆ ಇಲ್ಲ. ನವಂಬರ್ ತಿಂಗಳ ಬಂದರೆ ಎಲ್ಲರಿಗೂ ಕನ್ನಡದ ಕನಸು ಬಿದ್ದರೆ ಸಿದ್ದಣ್ಣಗೆ ಟಿಪ್ಪು ಕನಸು ಬೀಳುತ್ತಿದೆ. ಸಿದ್ದು ಕನಸಿನಲ್ಲಿ ಮೊದಲು ಯಡಿಯೂರಪ್ಪ ಮತ್ತು ಅನಂತಕುಮಾರ್ ಮಾತ್ರ ಬರುತ್ತಿದ್ದರು. ಆದರೆ ಇತ್ತೀಚಿಗೆ ನಾನು ಕನಸಿನಲ್ಲಿ ಬರುತ್ತಿದ್ದೇನೆ ಎಂದು ವ್ಯಂಗ್ಯವಾಡಿದ್ದಾರೆ.
ರಾಜ್ಯವನ್ನು ಲೂಟಿ ಹೊಡೆಯುತ್ತಿರುವ ದೇನಾಶಿ ಸಿದ್ದರಾಮಯ್ಯ ಎಂದು ವಾಗ್ದಾಳಿ ನಡೆಸಿದ್ದಾರೆ. ಕುಡಿದುಕೊಂಡು, ಮಾಂಸ ತಿಂದುಕೊಂಡು ದೇವಸ್ಥಾನಕ್ಕೆ ಹೋಗೋ ನಾಯಕ ಬೇಕಾ ? ಎಂದು ಲೇವಡಿ ಮಾಡಿದ್ದಾರೆ.
