ಬೆಂಗಳೂರು(ಅ.2): ಕೇಂದ್ರವು ಕಾವೇರಿ ವಿಚಾರದಲ್ಲಿ ಮುಂದೆ ಅನುಸರಿಸುವ ಮಾರ್ಗವನ್ನು ಪರದೆ ಮೇಲೆ ನೋಡಿ ಎಂದು ಕೇಂದ್ರ ಸಾಂಖ್ಯಿಕ ಮತ್ತು ಯೋಜನಾ ಅನುಷ್ಠಾನ ಸಚಿವ ಡಿ.ವಿ. ಸದಾನಂದ ಗೌಡ ತಿಳಿಸಿದರು.
ಕಾವೇರಿ ನಿರ್ವಹಣಾ ಮಂಡಳಿ ರಚನೆ ಮಾಡಬಾರದೆಂದು ಪ್ರಧಾನಿ ಬಳಿ ಮತ್ತೊಮ್ಮೆ ಚರ್ಚೆ ನಡೆಸುತ್ತೇವೆ. ಕಾವೇರಿ ಮಂಡಳಿ ರಚಿಸದಂತೆ ನಾವೂ ಕೋರ್ಟ್ಗೆ ತಿಳಿಸಿದ್ದೆವು. ನಾನು ಕೇಂದ್ರ ಕಾನೂನು ಸಚಿವನಾಗಿದ್ದಾಗಲೂ ಕೋರ್ಟ್ಗೆ ತಿಳಿಸಲಾಗಿತ್ತು.
ಕಾವೇರಿ ವಿಚಾರದಲ್ಲಿ ಕೇಂದ್ರ ಸರ್ಕಾರ ಕ್ರಮಕೈಗೊಳ್ಳುತ್ತದೆ. ಕಾವೇರಿ ನೀರು ನಿರ್ವಹಣ ಮಂಡಳಿ ರಚಿಸದಂತೆ ನ್ಯಾಯಾಲಯಕ್ಕೆ ಸ್ಪಷ್ಟವಾಗಿ ಹೇಳಿದ್ದೆವು. ರಾಜ್ಯ ನೀರಾವರಿ ಸಚಿವರ ಜೊತೆ ಕೂಡ ಮಾತುಕತೆ ನಡೆಸಿ ಇದೇ ವಿಚಾರ ತಿಳಿಸಿದ್ದೆ. ಕಾವೇರಿ ಕುರಿತು ಎಲ್ಲ ಮಾಧ್ಯಮಗಳ ಮುಂದೆ ಹೇಳಿದರೆ ತೂಕ ಹೆಚ್ಚು ಅಂದುಕೊಳ್ಳುತ್ತಾರೆ. ಮುಂದೆ ಕೇಂದ್ರ ಸರ್ಕಾರ ಅನುಸರಿಸುವ ಮಾರ್ಗವನ್ನು ಪರದೆ ಮೇಲೆ ನೋಡಿ ಎಂದು ಕೇಂದ್ರ ಸಚಿವರು ತಿಳಿಸಿದರು.
